ಕೊಪ್ಪಳ: ಹನುಮ ಮಾಲಧಾರಿಗಳ ವ್ರತ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಮಾಲೆ ವಿಸರ್ಜಿಸಿದರು.
ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ ವ್ರತ ಪೂರ್ಣಗೊಳಿಸಿದ ಹನುಮ ಮಾಲಾಧಾರಿಗಳು - ಹನುಮ ಮಾಲಧಾರಿಗಳು ಲೆಟೆಸ್ಟ್ ನ್ಯೂಸ್
ಹನುಮ ಮಾಲಾಧಾರಿಗಳ ವ್ರತ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಮಾಲೆ ವಿಸರ್ಜಿಸಿದರು.
ಇಂದು ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರಗಳು, ಅಲಂಕಾರ ಹಾಗೂ ಪವಮಾನ ಹೋಮ ನಡೆದವು. ಅಂಜನಾದ್ರಿ ಬೆಟ್ಟಕ್ಕೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಹನುಮ ಮಾಲಾಧಾರಿಗಳು ಹಾಗೂ ಭಕ್ತರು ಮಾಲೆ ವಿಸರ್ಜಿಸುವ ಮೂಲಕ ತಮ್ಮ ವ್ರತವನ್ನು ಪೂರ್ಣಗೊಳಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅತೀ ಹೆಚ್ಚಿನ ಸಂಖ್ಯೆಯ ಮಾಲಾಧಾರಿಗಳು ಆಗಮಿಸಿದ್ದರು.
ಚಿಕ್ಕೋಡಿ ಭಾಗವೊಂದರಿಂದಲೇ ಸುಮಾರು 8 ಸಾವಿರದಷ್ಟು ಹನುಮ ಮಾಲಾಧಾರಿಗಳು ಆಗಮಿಸಿದ್ದು, ಅಂಜನಾದ್ರಿ ಬೆಟ್ಟದಲ್ಲಿ ಎಲ್ಲಿ ನೋಡಿದರೂ ಕೇಸರಿ ಉಡುಗೆ ತೊಟ್ಟ ಮಾಲಾಧಾರಿಗಳೇ ಕಾಣುತ್ತಿದ್ದರು. ಜೈ ಭಜರಂಗಿ ಎಂಬ ಭಕ್ತಿಯ ಘೋಷಣೆಗಳು ಬೆಟ್ಟದಲ್ಲಿ ಪ್ರತಿಧ್ವನಿಸಿದವು. ಬೆಟ್ಟಕ್ಕೆ ಬಂದಂತಹ ಭಕ್ತರಿಗೆ ಪ್ರಸಾದ ವ್ಯವಸ್ಥೆ ಸಹ ಮಾಡಲಾಗಿತ್ತು.