ಕರ್ನಾಟಕ

karnataka

ETV Bharat / state

ಅಂಜನಾದ್ರಿಯಲ್ಲಿ ಹನುಮಮಾಲೆ ವಿರಮಣ: ಮುಂಜಾನೆ 3 ಗಂಟೆಯಿಂದಲೇ ದೇಗುಲ ಓಪನ್ - kannada hanuman jayanti history

ಹನುಮದ್ ವ್ರತ. ಅಂಜನಾದ್ರಿಯ ದೇಗುಲದಲ್ಲಿ ಮುಂಜಾನೆ 3 ಗಂಟೆಯಿಂದಲೇ ಭಕ್ತರ‌ ದರ್ಶನಕ್ಕೆ ಅವಕಾಶ. ಜನ ದಟ್ಟಣೆ ತಪ್ಪಿಸಲು ವಿಶೇಷ ಪೂಜೆ ಆರಂಭ.

Hanuma Mala immersion program at  Anjanadri
ಅಂಜನಾದ್ರಿ

By

Published : Dec 5, 2022, 8:59 AM IST

Updated : Dec 5, 2022, 10:41 AM IST

ಗಂಗಾವತಿ: ಹನುಮದ್ ವ್ರತದ‌ ಅಂಗವಾಗಿ ತಾಲೂಕಿನ ಅಂಜನಾದ್ರಿಯ ದೇಗುಲವನ್ನು ಮುಂಜಾನೆ ಮೂರು ಗಂಟೆಯಿಂದಲೇ ತೆರೆಯಲಾಗಿದೆ. ನಾಡಿನ ನಾನಾ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ದಟ್ಟಣೆ ತಪ್ಪಿಸಲು ಈ ವಿಶೇಷ ಪೂಜೆ ಆರಂಭಿಸಲಾಗಿದೆ.

ಅಂಜನಾದ್ರಿಯಲ್ಲಿ ಹನುಮಮಾಲೆ ವಿರಮಣ

ಆಂಜನೇಯನ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ಕಿರಿದಾದ ಬೆಟ್ಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಸೇರಿದ್ದರು. 578 ಮೆಟ್ಟಿಲುಗಳುಳ್ಳ ಬೆಟ್ಡದ ಎತ್ತರಕ್ಕೂ ಭಕ್ತರು ನೆರೆದಿದ್ದರು. ಬೆಳಗ್ಗೆ 6 ಆರು ಗಂಟೆಯಿಂದಲೇ ಭಕ್ತರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ.

ಅಂಜನಾದ್ರಿಯಲ್ಲಿ ಹನುಮಮಾಲೆ ವಿರಮಣ: ಮುಂಜಾನೆ 3 ಗಂಟೆಯಿಂದಲೇ ದೇಗುಲ ಓಪನ್

ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರು ಭಾನುವಾರ ರಾತ್ರಿಯೇ ಬೆಟ್ಟಕ್ಕೆ ಆಗಮಿಸಿ ವಿಶ್ರಾಂತಿ ಪಡೆದಿದ್ದರು. ಬೆಳಗ್ಗೆ ಸ್ನಾನ ಮುಗಿಸಿ ದೇವರ ದರ್ಶನ ಪಡೆದು, ಮಾಲೆ ವಿರಮಣ ಮಾಡಿ ತಮ್ಮೂರಿನತ್ತ ಪಯಣ ಬೆಳೆಸುತ್ತಿರುವುದು ಕಂಡು ಬಂದಿದೆ.

ಇದನ್ನೂ ಓದಿ:ಹನುಮ ಮಾಲೆ ಧರಿಸಿ ಅಂಜನಾದ್ರಿ ಬೆಟ್ಟಕ್ಕೆ ಹೊರಟ ಮುಸ್ಲಿಂ ಮಾಲಾಧಾರಿ..

Last Updated : Dec 5, 2022, 10:41 AM IST

ABOUT THE AUTHOR

...view details