ಕರ್ನಾಟಕ

karnataka

ETV Bharat / state

ಅಂಜನಾದ್ರಿಯಲ್ಲಿ ಮಧ್ಯರಾತ್ರಿಯಿಂದಲೇ ಹನುಮ ಜಯಂತಿ ಆರಂಭ - ಅಂಜನಾದ್ರಿಯಲ್ಲಿ ಹನುಮ ಜಯಂತಿ

ಹನುಮ ಜಯಂತಿ ಹಿನ್ನೆಲೆಯಲ್ಲಿ ಗಂಗಾವತಿಯ ಪ್ರಸಿದ್ದ ಧಾರ್ಮಿಕ ತಾಣ ಅಂಜನಾದ್ರಿಯಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಅರ್ಚಕರಿಗೆ ಮಾತ್ರ ದೇಗುಲ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

Hanuma Jaynati at Anjanadri of Gangavat
ಆಂಜನೇಯಗೆ ವಿಶೇಷ ಅಲಂಕಾರ ಮಾಡುತ್ತಿರುವ ಅರ್ಚಕರು

By

Published : Apr 27, 2021, 9:01 AM IST

ಗಂಗಾವತಿ:ತಾಲೂಕಿನ ಐತಿಹಾಸಿಕ ಧಾರ್ಮಿಕ ತಾಣವಾದ ಅಂಜನಾದ್ರಿ ದೇಗುಲದಲ್ಲಿ ಹನುಮ ಜಯಂತಿ ಅಂಗವಾಗಿ ಮಧ್ಯರಾತ್ರಿ ಎರಡು ಗಂಟೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಶುರುವಾಗಿವೆ.

ದೇಗುಲದ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಕೋವಿಡ್ ಹಿನ್ನೆಲೆಯಲ್ಲಿ ಹನುಮ ಮಾಲಾಧಾರಿಗಳು ಸೇರಿದಂತೆ ಭಕ್ತಾಧಿಗಳು ಅಂಜನಾದ್ರಿ ದೇಗುಲ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಆದೇಶ ಮಾಡಿತ್ತು. ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಕೇವಲ ಅರ್ಚಕರಿಗೆ ಮಾತ್ರ ಅವಕಾಶ ನೀಡಿತ್ತು. ಹೀಗಾಗಿ, ವಿದ್ಯಾದಾಸ ಬಾಬಾ ಮಧ್ಯರಾತ್ರಿಯಿಂದಲೇ ಪೂಜೆ ಆರಂಭಿಸಿದ್ದಾರೆ.

ಆಂಜನೇಯಗೆ ವಿಶೇಷ ಅಲಂಕಾರ ಮಾಡುತ್ತಿರುವ ಅರ್ಚಕರು

ಇದನ್ನೂಓದಿ : ಅಯೋಧ್ಯೆಯ ಪ್ರಸಾದ-ವಸ್ತ್ರ ಅಂಜನಾದ್ರಿ ದೇಗುಲದಲ್ಲಿ ಸಮರ್ಪಣೆ

ಗಂಗಾಜಲ ಅಭಿಷೇಕ, 201 ತೆಂಗಿನಕಾಯಿ ನೀರಿನ ಅಭಿಷೇಕ, ಪಂಚಾಮೃತ ಅಭಿಷೇಕ, ಐದು ಅಡಿಯ ಇಡೀ ವಿಗ್ರಹಕ್ಕೆ ತುಪ್ಪ, ಕೇಸರಿ ಲೇಪನ, ಒಂದುಕಾಲು ಸಾವಿರ ಗುಲಾಬಿ ಹೂವಿನ ಅಲಂಕಾರ, ತುಳಸಿ ಅರ್ಚನೆ, ರಾಮ, ಅಂಜನಿ ಹಾಗೂ ಹನುಮ ದೇವರಿಗೆ ಕುಂಕುಮಾರ್ಚನೆ, ಮಹಾಮಂಗಳಾರತಿ ಮಾಡಲಾಯಿತು. ಬಳಿಕ ಪವಮಾನ ಹೋಮ, ಹವನ, ಪೂರ್ಣಾಹುತಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ABOUT THE AUTHOR

...view details