ಗಂಗಾವತಿ :ತಾಲೂಕಿನ ಚಿಕ್ಕರಾಂಪೂರದ ಬಳಿ ಇರುವ ಪ್ರಸಿದ್ಧ ಅಂಜನಾದ್ರಿ ದೇಗುಲದಲ್ಲಿ ಕೇವಲ ಒಂದು ತಿಂಗಳಲ್ಲಿ ರೂ. 17.98 ಲಕ್ಷ ಮೊತ್ತದ ದೇಣಿಗೆ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿದೆ. ಇದು ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.
ವರ್ಷದ ಕೊನೆಯ ದಿನವಾದ ಇಂದು (ಶುಕ್ರವಾರ) ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ದೇಗುಲದ ಆಡಳಿತ ಮಂಡಳಿಯ ಸದಸ್ಯರು ಹುಂಡಿಯ ಹಣ ಎಣಿಕೆ ಮಾಡಿದರು. ಈ ಸಂದರ್ಭದಲ್ಲಿ ₹17.98 ಲಕ್ಷ ಮೊತ್ತದ ನಗದು ಸಂಗ್ರಹವಾಗಿತ್ತು.
ಗಂಗಾವತಿಯಲ್ಲಿ ಹನುಮ ಜಯಂತಿ ವಿಶೇಷ ಈ ಪೈಕಿ ಐದು ವಿದೇಶಿ ನಾಣ್ಯಗಳು ಪತ್ತೆಯಾಗಿವೆ. ಹನುಮ ಜಯಂತಿ ಅಂಗವಾಗಿ ಬೆಟ್ಟಕ್ಕೆ ರಾಜ್ಯದ ನಾನಾ ಜಿಲ್ಲೆಯಿಂದ ಸುಮಾರು 30 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ಕಳೆದ ನವೆಂಬರ್ 30ರಂದು ಕೊನೆಯದಾಗಿ ಹುಂಡಿ ಹಣ ಎಣಿಕೆ ಮಾಡಲಾಗಿತ್ತು.
ಸೆಪ್ಟೆಂಬರ್, ಅಕ್ಬೋಬರ್ ಹಾಗೂ ನವೆಂಬರ್ ಮೂರು ತಿಂಗಳು ಸೇರಿ ಸುಮಾರು ₹23.48 ಲಕ್ಷ ಮೊತ್ತದ ಹಣ ಸಂಗ್ರಹವಾಗಿತ್ತು. ತಹಶೀಲ್ದಾರ್ ನಾಗರಾಜ್ ಅನುಪಸ್ಥಿತಿಯಲ್ಲಿ ಗ್ರೇಡ್-2 ತಹಶೀಲ್ದಾರ್ ವಿ. ಹೆಚ್ ಹೊರಪ್ಯಾಟಿ ಹುಂಡಿ ಎಣಿಕೆಯ ನೇತೃತ್ವವಹಿಸಿದ್ದರು.
ಓದಿ:ರಾಜ್ಯದಲ್ಲಿ ಒಮಿಕ್ರಾನ್ ಅಬ್ಬರ.. 23 ಹೊಸ ಸೋಂಕಿತರು ಪತ್ತೆ..