ಗಂಗಾವತಿ(ಕೊಪ್ಪಳ):ದೇಶ, ನಾಡು, ನುಡಿಯ ಬಗ್ಗೆ ಜನರಲ್ಲಿ ಅಭಿಮಾನ ಬೆಳೆಸಲು ಹಲವಾರು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಇಲ್ಲೊಬ್ಬರು ದೂರದ ಕಲಬುರಗಿಯಿಂದ ಬೆಂಗಳೂರಿನವರೆಗೂ ಹ್ಯಾಂಡಲ್ ಇಲ್ಲದ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಪಯಣದ ಉದ್ದೇಶವೇನು ಗೊತ್ತೇ?
ಬೈಕ್ ಎಂದರೆ ಇಂದು ಸುಸಜ್ಜಿತ ಬೈಕ್ ಅಲ್ಲ. ಹ್ಯಾಂಡಲ್ ಇಲ್ಲದೇ ಇರುವ ಬೈಕ್‌ನಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಈರಣ್ಣ ಕುಂದರಗಿ ಮಠ ಎಂಬವರು ಬೆಂಗಳೂರಿಗೆ ಸವಾರಿ ಮಾಡುತ್ತಿದ್ದಾರೆ. ತಮ್ಮ ಪ್ರಯಾಣದ ಭಾಗವಾಗಿ ಕೊಪ್ಪಳ ಜಿಲ್ಲೆಯ ಕಾರಟಗಿಗೆ ತಾಲ್ಲೂಕಿಗೆ ಆಗಮಿಸಿದ ಸಂದರ್ಭದಲ್ಲಿ ಜನರು ಆತ್ಮೀಯವಾಗಿ ಬರಮಾಡಿಕೊಂಡರು.
ರಾಜ್ಯಕ್ಕೆ ಕರ್ನಾಟಕಕ್ಕೆ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಈರಣ್ಣ ಕುಂದರಗಿ ಕಲಬುರಗಿಯಿಂದ ದೂರವಿರುವ ಬೆಂಗಳೂರಿಗೆ ಪ್ರಯಾಣಿಸುವ ಗುರಿ ಹೊಂದಿದ್ದಾರೆ.
ಕಲಬುರಗಿ ಜಿಲ್ಲಾಡಳಿತ ಭವನದಿಂದ ವಿಧಾನಸೌಧದವರೆಗೂ ಹಮ್ಮಿಕೊಂಡಿರುವ ಈ ಬೈಕ್ ಪ್ರಯಾಣದ ಸಂದರ್ಭದಲ್ಲಿ ಕನ್ನಡ ನಾಡು, ನುಡಿಯ ಬಗ್ಗೆ ವಿಶಿಷ್ಟ ಜಾಗೃತಿ ಮೂಡಿಸುವ ಅಭಿಯಾನವನ್ನು ಇವರು ಹಮ್ಮಿಕೊಂಡಿದ್ದಾರೆ. ಕಲಬುರಗಿಯಿಂದ ಜೇವರ್ಗಿ, ಶಹಾಪುರ, ಸುರುಪುರ, ಲಿಂಗಸುಗೂರ, ಮಸ್ಕಿ, ಸಿಂಧನೂರು ಮೂಲಕ ಈರಣ್ಣ ಕಾರಟಗಿಗೆ ಆಗಮಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಈರಣ್ಣ, "ಇದಕ್ಕೂ ಮೊದಲು ಹ್ಯಾಂಡಲ್‌ಲೆಸ್ ಬೈಕ್ ರೈಡ್ ಮಾಡಿ ದಾಖಲೆ ಮಾಡಿದ್ದೆ. ಆದರೆ ಇದೇ ಮೊದಲ ಬಾರಿಗೆ 680 ಕಿಲೋಮೀಟರ್ ಪ್ರಯಾಣ ಮಾಡುತ್ತಿದ್ದೇನೆ. ಇದು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಮತ್ತು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಆಗಲಿದೆ.
ಈಗ ಕಾರಟಗಿಯಿಂದ ಗಂಗಾವತಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹರಿಹರ, ಹೊನ್ನಳ್ಳಿ, ಶಿವಮೊಗ್ಗ, ಭದ್ರಾವತಿ, ತರೀಕೆರೆ, ಕಡೂರು, ಅರಸಿಕೆರೆ, ತಿಪಟೂರು, ತುಮಕೂರು ಮಾರ್ಗವಾಗಿ ಬೆಂಗಳೂರಿನ ವಿಧಾನಸೌಧದವರೆಗೆ ಪ್ರಯಾಣ ಮಾಡಲಿದ್ದೇನೆ" ಎಂದರು.
ಇದನ್ನೂ ಓದಿ:ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಉರುಸ್ ಆಚರಣೆ