ಕರ್ನಾಟಕ

karnataka

ETV Bharat / state

'ದಾರಿ ತಪ್ಪುತ್ತಿರುವ ಯುವಕರನ್ನು ಸಾಹಿತ್ಯದತ್ತ ಆಕರ್ಷಿಸಬೇಕಿದೆ' - Hallaganadda Literature Teaching Camp

ಪ್ರಾಚೀನ ಕನ್ನಡ, ಹೊಸಗನ್ನಡದ ಮಧ್ಯೆ ಇರುವ ನಡುಗನ್ನಡ ತಾಯಿ ಬೇರು ಇದ್ದಂತೆ. ಎರಡು ಕಾಲ ಘಟಕದ ಮಧ್ಯೆ ಸಂಪರ್ಕದ ಕೊಂಡಿಯಂತಾಗಿದ್ದು, ಆಳವಾದ ಅಧ್ಯಯನ ನಡೆಸಬೇಕಿದೆ ಎಂದು ಜಿಪಂನ ಹಣಕಾಸು ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯವತಿ ಮಾಣಿಕ್ ಬೋಲಾ ಹೇಳಿದರು.

Hallaganadda Literature Teaching Camp in koppal distric
ಹಳಗನ್ನಡ ಸಾಹಿತ್ಯ ಬೋಧನಾ ಶಿಬಿರ

By

Published : Jan 5, 2021, 4:13 PM IST

ಗಂಗಾವತಿ:ನಾನಾ ಕಾರಣಗಳಿಂದ ದಾರಿ ತಪ್ಪುತ್ತಿರುವ ಯುವ ಜನಾಂಗವನ್ನು ಸಾಹಿತ್ಯ ಕ್ಷೇತ್ರದತ್ತ ಸೆಳೆಯುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಜಿಲ್ಲಾ ಪಂಚಾಯಿತಿಯ ಹಣಕಾಸು ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯವತಿ ಮಾಣಿಕ್ ಬೋಲಾ ಹೇಳಿದರು.

ಇದನ್ನೂ ಓದಿ...ರಾಜಕೀಯ ಚಟುವಟಿಕೆಗಳ ನಡುವೆಯೂ 'ಬ್ಯಾಟ್​' ಬೀಸಿದ ರಾಘವೇಂದ್ರ ಹಿಟ್ನಾಳ್​!

ನಗರದ ಬಾಲಕಿಯರ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಂಪಿ ವಿವಿಯ ಹಸ್ತಪ್ರತಿ ವಿಭಾಗ, ಕನ್ನಡ ಭಾಷಾ ಬೋಧಕರ ವೇದಿಕೆ ಹಾಗೂ ಕಸಾಪ ಜಂಟಿಯಾಗಿ ಹಮ್ಮಿಕೊಂಡಿದ್ದ ಹಳೆಗನ್ನಡ ಸಾಹಿತ್ಯ ಬೋಧನಾ ಶಿಬಿರ-15 ಸಮಾರಂಭದಲ್ಲಿ ಅವರು ಮಾತನಾಡಿದರು.

ಹಳೆಗನ್ನಡ ಸಾಹಿತ್ಯ ಬೋಧನಾ ಶಿಬಿರ

ಯುವಕರು ತೀರಾ ಮೊಬೈಲ್ ಗೇಮಿಂಗ್​ ಹೀಗೆ ಹಲವು​ ವ್ಯಸನಿಗಳಿಗೆ ದಾಸರಾಗಿದ್ದಾರೆ. ಅವರನ್ನು ಸಾಹಿತ್ಯದತ್ತ ಸೆಳೆಯುವ ಕೆಲಸವಾಗಬೇಕು. ಸಾಹಿತ್ಯ ದುಶ್ಚಟಗಳಿಂದ ದೂರವಿರುವಂತೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

ABOUT THE AUTHOR

...view details