ಕೊಪ್ಪಳ : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. ಭಾರತ್ ಜೋಡೋ ಯಾತ್ರೆ ಮೂಲಕ ಸರ್ಕಾರ ರಚನೆಯ ಹುಚ್ಚು ಕನಸನ್ನು ಕಾಂಗ್ರೆಸ್ನವರು ಕೈ ಬಿಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಕಾಂಗ್ರೆಸ್ ಗೆಲುವಿನ ಹುಚ್ಚು ಕನಸು ಕೈಬಿಡಿ: ಸಚಿವ ಹಾಲಪ್ಪ ಆಚಾರ್ ವ್ಯಂಗ್ಯ - ಈಟಿವಿ ಭಾರತ ಕನ್ನಡ
ಈ ಹಿಂದೆ ಕಾಂಗ್ರೆಸ್ ನಮ್ಮ ನಡಿಗೆ ಕೃಷ್ಣೆ ಕಡೆಗೆ ಎಂದು ನಾಟಕ ಮಾಡಿ ಅಧಿಕಾರ ಹಿಡಿದರು. ಆದರೆ, ಕೊಟ್ಟ ಭರವಸೆ ಈಡೇರಿಸಲಿಲ್ಲ. ಬರೀ ಭ್ರಷ್ಟಾಚಾರ ಮಾಡುವಲ್ಲಿ ಕಾಲ ಹರಣ ಮಾಡಿದರು. ಇಂದು ಈ ಪಾದಯಾತ್ರೆಯಿಂದ ಅಧಿಕಾರ ಹಿಡಿಯುವ ಕನಸು ಕಾಣುತ್ತಿದ್ದಾರೆ ಎಂದರು.
ಕುಷ್ಟಗಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯಿಂದ ಆರಂಭವಾದ ಜನಸಂಕಲ್ಪ ಯಾತ್ರೆಗೆ ಜನರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿಂದೆ ಕಾಂಗ್ರೆಸ್ ನಮ್ಮ ನಡಿಗೆ ಕೃಷ್ಣೆ ಕಡೆಗೆ ಎಂದು ನಾಟಕ ಮಾಡಿ ಅಧಿಕಾರ ಹಿಡಿದರು. ಆದರೆ, ಕೊಟ್ಟ ಭರವಸೆ ಈಡೇರಿಸಲಿಲ್ಲ. ಬರೀ ಭ್ರಷ್ಟಾಚಾರ ಮಾಡುವಲ್ಲಿ ಕಾಲ ಹರಣ ಮಾಡಿತು. ದೇಶವನ್ನು ತುಂಡು ಮಾಡಿದ ಕಾಂಗ್ರೆಸ್ ಇದೀಗ ಚುನಾವಣೆ ಹಿನ್ನೆಲೆ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದು ವ್ಯಂಗವಾಡಿದರು.
ಇದನ್ನೂ ಓದಿ :ಇಂದು ಚಳ್ಳಕೆರೆಯಿಂದ ಭಾರತ್ ಜೋಡೋ ಪಾದಯಾತ್ರೆ: ರಾಹುಲ್ ಎದುರು ವಿದ್ಯಾರ್ಥಿನಿ ಭರತನಾಟ್ಯ