ಕೊಪ್ಪಳ : ಬಿಜೆಪಿಯಲ್ಲಿ ಪಕ್ಷಕ್ಕಾಗಿ ದುಡಿದವರಿಗೆ ಹೈಕಮಾಂಡ್ ಮೊದಲ ಆದ್ಯತೆ ನೀಡುತ್ತದೆ. ಈ ನಿಟ್ಟಿನಲ್ಲಿ ಬಿ.ವೈ ವಿಜಯೇಂದ್ರ ಅವರನ್ನ ವಿಧಾನ ಪರಿಷತ್ಗೆ ಕಳುಹಿಸುವ ವಿಚಾರವಿದೆ ಎಂದು ಸಚಿವ ಹಾಲಪ್ಪ ಆಚಾರ್ ಕೊಪ್ಪಳದಲ್ಲಿಂದು ಹೇಳಿದರು.
ಬಿ.ವೈ.ವಿಜಯೇಂದ್ರವರಿಗೆ ವಿಧಾನ ಪರಿಷತ್ ಟಿಕೆಟ್ ನೀಡುವ ಮೂಲಕ ಕುಟುಂಬ ರಾಜಕಾರಣಕ್ಕೆ ಬಿಜೆಪಿ ಮುಂದಾಗಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ವಿಜಯೇಂದ್ರ ಪಕ್ಷದ ಕಾರ್ಯಕರ್ತ ಅವರಿಗೆ ವಿಧಾನ ಪರಿಷತ್ ಚುನಾವಣೆ ಕೊಡುವುದರಲ್ಲಿ ತಪ್ಪೇನು? ಅವರು ಪಕ್ಷದ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಮಸ್ಕಿ ಸೇರಿದಂತೆ ವಿವಿಧ ಚುನಾವಣೆಯಲ್ಲಿ ದುಡಿದಿದ್ದಾರೆ. ಅವರು ಯಡಿಯೂರಪ್ಪ ಅವರ ಮಗ ಎಂದು ಮಾತ್ರಕ್ಕೆ ಅವರ ಹೆಸರನ್ನು ಶಿಫಾರಸು ಮಾಡುತ್ತಿಲ್ಲ ಎಂದರು.
ಬಿ.ವೈ. ವಿಜಯೇಂದ್ರಗೆ ಟಿಕೆಟ್ ಕೊಟ್ರೆ ತಪ್ಪೇನು?: ಸಚಿವ ಹಾಲಪ್ಪ ಪ್ರಶ್ನೆ ಕೊಪ್ಪಳದಲ್ಲಿ ಮಾವು ಮೇಳಕ್ಕೆ ಸಚಿವರಿಂದ ಚಾಲನೆ :ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಹಮ್ಮಿಕೊಂಡಿದ್ದ ಮೂರು ದಿನದ ಮಾವು ಮೇಳಕ್ಕೆ ಸಚಿವ ಹಾಲಪ್ಪ ಆಚಾರ್ ಸೋಮವಾರ ಚಾಲನೆ ನೀಡಿದರು.
ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಜಿಲ್ಲಾಮಟ್ಟದ ಮಾವು ಮೇಳದಲ್ಲಿ ವಿವಿಧ ಬಗೆಯ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಇಲ್ಲಿ ನಡೆಯುತ್ತಿದೆ. ಗ್ರಾಹಕರು ವಿವಿಧ ಬಗೆಯ ಮಾವನ್ನ ಖರೀದಿಸಿ ಸವಿಯಬಹುದಾಗಿದೆ. ಕಳೆದ ಮೂರು ವರ್ಷಗಳಿಂದ ತೋಟಗಾರಿಕೆ ಇಲಾಖೆಯು ಮಾವು ಮೇಳವನ್ನು ಆಯೋಜಿಸುತ್ತಾ ಬರುತ್ತಿದೆ.
ಇದನ್ನೂ ಓದಿ:ನಾ ಈವರೆಗೂ ಗೋಮಾಂಸ ತಿಂದಿಲ್ಲ.. ತಿನ್ನಬೇಕು ಅನಿಸಿದ್ರೇ ತಿಂದೇ ತಿನ್ನುತ್ತೇನೆ.. ಇವರ್ಯಾರೀ ಕೇಳೋಕೆ.. ಸಿದ್ದರಾಮಯ್ಯ ಗುಡುಗು