ಕೊಪ್ಪಳ:ಈ ರಾಜ್ಯ ಕಂಡ ಬಲಿಷ್ಠ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಮಾಜಿ ಸಚಿವ ಹೆಚ್ ಎಂ ರೇವಣ್ಣ ಅವರು ಹೇಳಿದರು.
ಜಿಲ್ಲೆಯ ಬೇವಿನಹಳ್ಳಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಎಲ್ಲಿ ಸ್ಪರ್ಧೆ ಮಾಡಬೇಕೆಂಬು ಎಂಬುದರ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಸಿದ್ದರಾಮಯ್ಯ ಈ ರಾಜ್ಯದ ದೊಡ್ಡ ನಾಯಕ. ಅವರಿಗೆ ಅನೇಕರು ಆಹ್ವಾನವನ್ನು ನೀಡುತ್ತಿದ್ದಾರೆ. ಆದರೆ, ಇನ್ನೊಮ್ಮೆ ಬಾದಾಮಿಯಲ್ಲೇ ಸ್ಪರ್ದಿಸಿ ಗೆಲ್ಲಬೇಕೆಂಬ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ ಎಂದರು.
ಮಾಜಿ ಸಚಿವ ಹೆಚ್ ಎಂ ರೇವಣ್ಣ ಅವರು ಮಾತನಾಡಿರುವುದು ಇದರ ಹೊರತಾಗಿಯೂ ಕೋಲಾರ, ಚಿಕ್ಕನಾಯಕನಹಳ್ಳಿಯಲ್ಲಿ ಅವರನ್ನು ಸ್ಪರ್ಧೆ ಮಾಡಲು ಕರೆಯುತ್ತಿದ್ದಾರೆ. ಜೊತೆಗೆ ಕೊಪ್ಪಳದಲ್ಲೂ ಸ್ಪರ್ಧಿಸಲು ಕರೆದಿದ್ದಾರೆ. ಹೀಗಾಗಿ, ಅವರ ಜನಪ್ರಿಯತೆ ಹೆಚ್ಚಿದೆ ಎಂದು ಹೇಳಿದರು.
ಅರವಿಂದ ಲಿಂಬಾವಳಿ ಮಹಿಳೆಯೊಂದಿಗೆ ಗಲಾಟೆಮಾಡಿಕೊಂಡ ವಿಚಾರವಾಗಿ ಪ್ರತ್ರಿಕ್ರಿಯಿಸಿ, ಬಿಜೆಪಿ ನಾಯಕರು ಬೇಟಿ ಪಡಾವೋ, ಬೇಟಿ ಬಚಾವೋ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದರು. ಇವರ ಆಡಳಿತ ಅವಧಿಯಲ್ಲಿ ಉತ್ತರ ಭಾರತದಿಂದ, ದಕ್ಷಿಣ ಭಾರತದವರೆಗೂ ಮಹಿಳೆಯರ, ಯುವತಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಳವಾಗಿವೆ. ಬಿಜೆಪಿ ಚುನಾಯಿತ ಜನಪ್ರತಿನಿಧಿಗಳು ಅಸೆಂಬ್ಲಿಯಲ್ಲಿ ಕುಳಿತು ಅಶ್ಲೀಲ ಚಿತ್ರ ವೀಕ್ಷಿಸುವುದನ್ನ ರಾಜ್ಯದ ಜನರು ನೋಡಿದ್ದಾರೆ.
ಮಾಜಿ ಸಚಿವ ಹೆಚ್ ಎಂ ರೇವಣ್ಣ ಅವರು ಮಾತನಾಡಿರುವುದು ಮತ್ತೊಬ್ಬ ನೆರೆಮನೆ ಮಹಿಳೆಗೆ ಮತ್ತಿಟ್ಟ ರಾಜಕಾರಣಿಯನ್ನು ಸಿಎಂ ಕಾರ್ಯದರ್ಶಿಯಾಗಿ ಮಾಡಿಕೊಂಡಿದ್ದಾರೆ. ಇದೇ ವಿಚಾರವಾಗಿ ಬಿಜೆಪಿಯ ಅನೇಕರು ಮಂತ್ರಿ ಪದವಿ ಕಳೆದುಕೊಂಡವರನ್ನು ನೋಡಿದ್ದೇವೆ. ಲಿಂಬಾವಳಿ ಅವರದ್ದು ಸಲಿಂಗ ಕಾಮದಲ್ಲಿ ಹೆಸರು ಕೇಳಿಬಂದಿತ್ತು. ಜನ ಅದನ್ನ ಮರೆತಿಲ್ಲ. ಈಗ ಭೂತದ ಬಾಯಲ್ಲಿ ಭಗವದ್ಗೀತೆ ಹೇಳುವಂತಾಗಿದೆ. ಒಬ್ಬ ಮಹಿಳೆಯ ಮೇಲೆ ಈ ರೀತಿ ವರ್ತನೆ ಮಾಡಿದ್ದು ಖಂಡನೀಯ. ಒತ್ತುವರಿ ಮಾಡಿದ್ದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಇವರ್ಯಾರು ಬಾಯಿಗೆ ಬಂದಂತೆ ಮಾತನಾಡಲು ಎಂದು ಹರಿಹಾಯ್ದರು.
ನರೇಂದ್ರ ಮೋದಿ ಅವರು ಇತ್ತೀಚೆಗೆ ರಾಜ್ಯದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಿದರು. ಸಿದ್ದರಾಮೋತ್ಸವದ ಬಗ್ಗೆ ಬಿಜೆಪಿ, ಮೋದಿ ಇಬ್ಬರಿಗೂ ಭಯ ಇದೆ. ಹಾಗಾಗಿ, ತಿಂಗಳಿಗೊಮ್ಮೆ ಕರ್ನಾಟಕ್ಕೆ ಬರುವುದಾಗಿ ಹೇಳಿದ್ದಾರೆ ಎಂದು ಹೆಚ್ ಎಂ ರೇವಣ್ಣ ಲೇವಡಿ ಮಾಡಿದರು.
ಓದಿ:ಲಿಂಬಾವಳಿ ಅವರ ನಡವಳಿಕೆನೇ ಬೇರೆ ಇದೆ: ಬಿಜೆಪಿ ಶಾಸಕನ ಕುರಿತು ಹೆಚ್ಡಿಕೆ ಲೇವಡಿ