ಕರ್ನಾಟಕ

karnataka

ETV Bharat / state

ಕಳ್ಳತನ ತಡೆಗೆ ಜಿಎಸ್‌ಎಂ‌ ಸಿಸ್ಟಮ್ ಪರಿಚಯಿಸಿದ ಕುಷ್ಟಗಿ ಪೊಲೀಸರು - GSM system and syren for control theft in Kushtagi koppal district

ಮನೆ, ಮಳಿಗೆ ಸೇರಿ ಇತರೆಡೆಗಳಲ್ಲಿ ನಡೆಯುವ ಕಳ್ಳತನ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ಅತ್ಯಾಧುನಿಕ ತಂತ್ರಜ್ಞಾನದ 160 ಡಿಗ್ರಿ ಆ್ಯಂಗಲ್‌ನಲ್ಲಿ ಹಾಗೂ 8 ಮೀಟರ್ ದೂರದಿಂದ ಸೆನ್ಸರ್ ಮೂಲಕ ವ್ಯಕ್ತಿಯನ್ನು ಗುರುತಿಸುವ ಡಿವೈಸ್‌ ಇದಾಗಿದೆ.

GSM system and syren for control theft in Kushtagi koppal district
ಕಳ್ಳತನ ಮಟ್ಟ ಹಾಕಲು ಜಿಎಎಸ್‌ಎಂ‌ ಸಿಸ್ಟಮ್; ಹೊಸ ಪ್ರಯೋಗಕ್ಕೆ ಮುಂದಾದ ಕುಷ್ಟಗಿ ಪೊಲೀಸರು

By

Published : Jan 7, 2022, 4:03 PM IST

Updated : Jan 7, 2022, 7:15 PM IST

ಕುಷ್ಟಗಿ(ಕೊಪ್ಪಳ): 160 ಡಿಗ್ರಿ ಆ್ಯಂಗಲ್‌ನಲ್ಲಿ ಹಾಗೂ 8 ಮೀಟರ್ ದೂರದಿಂದ ಸೆನ್ಸರ್ ಮೂಲಕ ಗುರುತಿಸಿ ಅನ್ಯ ವ್ಯಕ್ತಿ ಬಂದಿರುವ ಮಾಹಿತಿ ನೀಡುವ ಜಿಎಸ್‌ಎಂ ಮೋಷನ್ ಸೆನ್ಸಾರ್‌ನ ಜೀನಿಯಸ್ ಡಿವೈಸ್‌ ಅನ್ನು ಕುಷ್ಟಗಿ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್‌ ಕಚೇರಿ ಪರಿಚಯಿಸಿದೆ.


ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳ ಹಾವಳಿಗೆ ಕಡಿವಾಣ ಹಾಕಲು ಜಿಎಸ್‌ಎಂ ಸಿಸ್ಟಮ್ ಹಾಗೂ ಕನೆಕ್ಟೆಟೆಡ್ ಅಲಾರಾಂ ಸಾಧನದ ಮಹತ್ವ, ಕಾರ್ಯ ವಿಧಾನದ ಮಾಹಿತಿಯನ್ನು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ವಿವರಿಸಿದರು.

ಕುಷ್ಟಗಿ ತಾಲೂಕಿನ ವಿವಿಧ ಶಾಲೆ, ಕಚೇರಿ ಹಾಗೂ ವಾಣಿಜ್ಯ ಮಳಿಗೆಯಲ್ಲಿ ಪದೇ ಪದೇ ಆಗುತ್ತಿರುವ ಕಳ್ಳತನ ಕೃತ್ಯಗಳನ್ನು ತಡೆಗಟ್ಟಲು ಜೀನಿಯಸ್ ಟೆಕ್ನಾಲಜಿ ರೂಪಿಸಿರುವ ಅತ್ಯಾಧುನಿಕ ಹಾಗೂ ಈಗಾಗಲೇ ಚಾಲ್ತಿಯಲ್ಲಿರುವ ಡಿವೈಸ್ ಬಳಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಈ ಡಿವೈಸ್‌ಗೆ 6 ಸಾವಿರ ರೂ. ಮೊತ್ತವಿದ್ದು ಯಾರೂ ಬೇಕಾದರೂ ಅಳವಡಿಸಿಕೊಳ್ಳಬಹುದು.

'ಒತ್ತಾಯವಿಲ್ಲ, ಬೇಕಿದ್ದವರು ಸಾಧನ ಅಳವಡಿಸಿಕೊಳ್ಳಿ'

ಇದಕ್ಕೆ ಒತ್ತಾಯವಿಲ್ಲ, ತಾಂತ್ರಿಕ ಯಂತ್ರ ಬೇಕಿದ್ದರೆ ಸಹಾಯ ಹಾಗೂ ಮಾಹಿತಿ ನೀಡುವುದಷ್ಟೇ ನಮ್ಮ ಕೆಲಸ. ಇದರಿಂದ ಚಾಲಾಕಿ ಕಳ್ಳರ ಹಾವಳಿ ತಗ್ಗಿಸಲು, ನಿಖರ ಮಾಹಿತಿಯಿಂದ ಕಳ್ಳರನ್ನು ಹಿಡಿಯಲು ಸಾಧ್ಯವಾಗುತ್ತದೆ. ಇದರಿಂದ ಪೊಲೀಸರಿಗೂ ಪತ್ತೆ ಕಾರ್ಯಾಚರಣೆ ಸುಲಭ ಆಗಲಿದೆ.

ಈ ಡಿವೈಸ್ ಅಳವಡಿಸಿಕೊಂಡ ಪ್ರದೇಶದಿಂದ 8 ಮೀಟರ್ ಅಂತರ ಹಾಗೂ 160 ಡಿಗ್ರಿ ದಿಕ್ಕಿನ ವ್ಯಾಪ್ತಿಯಲ್ಲಿ ಯಾರೇ ವ್ಯಕ್ತಿ ಕಳ್ಳತನಕ್ಕೆ ಯತ್ನಿಸಿದರೆ, ಕಿಟಕಿ ಹಾಗೂ ಬಾಗಿಲು ಮುರಿಯುವ ಯತ್ನ ಮಾಡಿದರೆ ಡಿವೈಸ್ ಈ ಜಾಗೃತಗೊಂಡು ಏಕಕಾಲಕ್ಕೆ ಡಿವೈಸ್‌ನಲ್ಲಿ ಎಂಟ್ರಿ ಮಾಡಿದ ಐವರಿಗೆ ಅಲಾರಂ ಸೈರನ್ ಮಾಹಿತಿ ಮೊಬೈಲ್‌ಗೆ ರವಾನೆಯಾಗುತ್ತದೆ.

ಈ ಮೂಲಕ ತತ್‌ಕ್ಷಣವೇ ಕಾರ್ಯಾಚರಣೆಗಿಳಿದು ಕಳ್ಳತನ ತಡೆಯಬಹುದು. ಜೊತೆಗೆ ಕಳ್ಳರನ್ನು ಬಂಧಿಸಲು ಸಾಧ್ಯವಿದೆ ಸಿಪಿಐ ನಿಂಗಪ್ಪ ಹೇಳಿದ್ದಾರೆ. ಹೊರ ವಲಯದ ಒಂಟಿ ಮನೆ, ಉದ್ಯಮ, ಮನೆಗಳಿಗೆ ಈ ಡಿವೈಸ್ ಸಾಧನ ಅಳವಡಿಸಿಕೊಂಡು ಕಳ್ಳತನ ಹಾವಳಿ ಮಟ್ಟಹಾಕಬಹುದು ಎಂದರು.

ಇದನ್ನೂ ಓದಿ:ಪ್ರಧಾನ ಸಿವಿಲ್ ನ್ಯಾಯಾಧೀಶರ ಮಗ ಈಗ ಸ್ಥಳೀಯ ಅಂಗನವಾಡಿ ವಿದ್ಯಾರ್ಥಿ

Last Updated : Jan 7, 2022, 7:15 PM IST

For All Latest Updates

TAGGED:

ABOUT THE AUTHOR

...view details