ಕರ್ನಾಟಕ

karnataka

ETV Bharat / state

ಸೇನಾ ಸೇವಾ ನಿವೃತ್ತಿ ಹೊಂದಿ ಗ್ರಾಮಕ್ಕೆ ಬಂದ ಯೋಧನಿಗೆ ಅದ್ದೂರಿ ಸ್ವಾಗತ - ಕೊಪ್ಪಳ ಯೋಧನಿಗೆ ಅದ್ದೂರಿ ಸ್ವಾಗತ

2000ನೇ ಇಸ್ವಿಯಲ್ಲಿ ಬಿಎಸ್‌ಎಫ್ ಗೆ ಸೇರ್ಪಡೆಯಾದರು. ಕಾರವಾರ, ಜಮ್ಮು ಕಾಶ್ಮೀರ್, ಪಂಜಾಬ್‌, ಗುಜರಾತ್‌, ರಾಜಸ್ತಾನ್‌, ಮೇಘಾಲಯಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಈಗ ಹುಟ್ಟೂರಿಗೆ ಮರಳಿದ್ದಾರೆ..

grand-wellcome-for-retired-soldier-in-koppal-basapura-village
ಯೋಧನಿಗೆ ಅದ್ದೂರಿ ಸ್ವಾಗತ

By

Published : Sep 4, 2021, 9:56 PM IST

ಕೊಪ್ಪಳ :ಸತತ 21 ವರ್ಷಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿ ಸೇನಾ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿ ಯೋಧನನ್ನು ತಾಲೂಕಿನ ಬಸಾಪೂರ ಗ್ರಾಮಸ್ಥರು ಅದ್ದೂರಿಯಾಗಿ ಬರಮಾಡಿಕೊಂಡರು.

ಬಸಾಪುರ ಗ್ರಾಮದಿಂದ ಸೇನೆಗೆ ಸೇರಿದ ಏಕೈಕ ವ್ಯಕ್ತಿಯಾದ ವಡಿವೇಲು ಅವರು ಸೇನಾ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದರು. ಈ ವೇಳೆ ಗ್ರಾಮದ ಜನರು ಭವ್ಯ ಸ್ವಾಗತ ಕೋರಿದರು. ವೀರ ಯೋಧನ ಪರ ಘೋಷಣೆ ಹಾಕಿ ಆರತಿ ಬೆಳಗಿ, ಪಟಾಕಿ ಸಿಡಿಸಿ, ಪುಷ್ಪಾರ್ಚನೆ ಮಾಡಿ ಅದ್ದೂರಿಯಾಗಿ ಸ್ವಾಗತಿಸಿದರು.

ಸೇನಾ ಸೇವಾ ನಿವೃತ್ತಿ ಹೊಂದಿ ಗ್ರಾಮಕ್ಕೆ ಬಂದ ಯೋಧನಿಗೆ ಅದ್ದೂರಿ ಸ್ವಾಗತ

ರಾಮಸ್ವಾಮಿ ಮತ್ತು ಪಾಪಮ್ಮ ಅವರ ಪುತ್ರ ವಡಿವೇಲು ಅವರು ಹುಟ್ಟೂರು ಬಸಾಪೂರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ನಂತರ ಆನೆಗುಂದಿಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.

ಗಂಗಾವತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದು, 2000ನೇ ಇಸ್ವಿಯಲ್ಲಿ ಬಿಎಸ್‌ಎಫ್ ಗೆ ಸೇರ್ಪಡೆಯಾದರು. ಕಾರವಾರ, ಜಮ್ಮು ಕಾಶ್ಮೀರ್, ಪಂಜಾಬ್‌, ಗುಜರಾತ್‌, ರಾಜಸ್ತಾನ್‌, ಮೇಘಾಲಯಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಈಗ ಹುಟ್ಟೂರಿಗೆ ಮರಳಿದ್ದಾರೆ.

ABOUT THE AUTHOR

...view details