ಗಂಗಾವತಿ:ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆಯಲ್ಲಿ ಸಂತ್ರಸ್ತರಾದವರಿಗೆ ನೀಡಲು ಎಂದು ತಾಲ್ಲೂಕಿನ ವಿವಿಧ ಭಾಗದಿಂದ ಸಂಗ್ರಹಿಸಿದ್ದ ಧಾನ್ಯ ವಿಲೇವಾರಿಯಾಗದೇ ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಕೊಳೆಯುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ್ದ ಧಾನ್ಯ ಕೊಳೆಯುವ ಸ್ಥಿತಿಯಲ್ಲಿ ಪತ್ತೆ - ಗಂಗಾವತಿ ತಾಲ್ಲೂಕು ಪಂಚಾಯಿತಿಯಲ್ಲಿ ಕೊಳೆಯುವ ಸ್ಥಿತಿಯಲ್ಲಿ ಧಾನ್ಯ ಪತ್ತೆ
ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆಯಲ್ಲಿ ಸಂತ್ರಸ್ತರಾದವರಿಗೆ ನೀಡಲೆಂದು ತಾಲ್ಲೂಕಿನ ವಿವಿಧ ಭಾಗದಿಂದ ಸಂಗ್ರಹಿಸಿದ್ದ ಧಾನ್ಯ ವಿಲೇವಾರಿಯಾಗದೇ ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಕೊಳೆಯುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದ್ರೆ ಈ ಬಗ್ಗೆ ತಾಲ್ಲೂಕು ಪಂಚಾಯತ್ ಇಒ ಸ್ಪಷ್ಟನೆ ಕೊಟ್ಟಿದ್ದಾರೆ.
![ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ್ದ ಧಾನ್ಯ ಕೊಳೆಯುವ ಸ್ಥಿತಿಯಲ್ಲಿ ಪತ್ತೆ](https://etvbharatimages.akamaized.net/etvbharat/prod-images/768-512-4736686-thumbnail-3x2-vid.jpg)
ಧಾನ್ಯ ಕೊಳೆಯುವ ಸ್ಥಿತಿಯಲ್ಲಿ ಪತ್ತೆ
ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ್ದ ಧಾನ್ಯ ಕೊಳೆಯುವ ಸ್ಥಿತಿಯಲ್ಲಿ ಪತ್ತೆ
ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯಸೌಧದಲ್ಲಿ ಕಂಡು ಬಂದ ಈ ದುಸ್ಥಿತಿಯನ್ನು ಕೆಲ ಸಂಘಟನೆಯ ಯುವಕರು ಬೆಳಕಿಗೆ ತಂದಿದ್ದಾರೆ. ಸುಮಾರು 80 ಕ್ಕೂ ಹೆಚ್ಚು ಮೂಟೆಗಳಲ್ಲಿ ಸಾವಿರಾರು ಕೆಜಿ ಅಕ್ಕಿ ಹಾಳಾಗುತ್ತಿದೆ.
ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ತಾಲ್ಲೂಕು ಪಂಚಾಯಿತಿ ಇಒ ತಿಮ್ಮಾನಾಯ್ಕ್, ಅದು ಸಿದ್ದರಾಪುರದ ಮಹಿಳೆಯರು ತಂದಿಟ್ಟಿರುವ ಅಕ್ಕಿ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೊಟ್ಟರು.