ಕರ್ನಾಟಕ

karnataka

ETV Bharat / state

ಕಾಶ್ಮೀರದ 370ನೇ ವಿಧಿ ರದ್ಧತಿಗೆ ಶ್ರಮಿಸಿದವರನ್ನು ಅಭಿನಂದಿಸೋಣ: ಡಿಸಿಎಂ ಕಾರಜೋಳ - ಒಂದು ದೇಶ ಒಂದು ಸಂವಿಧಾನ ಕಾರ್ಯಾಗಾರ

ಕಾಶ್ಮೀರದಲ್ಲಿ ಪರಸ್ಥಿತಿ ಬಹಳ ಕೆಟ್ಟದಾಗಿತ್ತು. ನಾನು ಕಾಶ್ಮೀರಕ್ಕೆ ಹೋದಾಗ ಅಲ್ಲಿನ ಪರಸ್ಥಿತಿಯನ್ನು ಕಣ್ಣಾರೆ ಕಂಡಿದ್ದೇನೆ.‌ ಇಂದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರು ಇತಿಹಾಸದಲ್ಲಿ ಉಳಿಯುವಂತಹ ಕೆಲಸ ಮಾಡಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ಡಿಸಿಎಂ. ಗೋವಿಂದ ಕಾರಜೋಳ

By

Published : Sep 21, 2019, 12:21 AM IST

ಕೊಪ್ಪಳ:ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಒಂದು ದೇಶ ಒಂದು ಸಂವಿಧಾನ ಕಾರ್ಯಾಗಾರವನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಉದ್ಘಾಟಿಸಿದರು.

ಡಿಸಿಎಂ. ಗೋವಿಂದ ಕಾರಜೋಳ

ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿಯ ವಿಶೇಷ ಸ್ಥಾನಮಾನ ರದ್ಧತಿಗೆ ಅನೇಕರು ಹೋರಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಕ್ಕಿದೆ. 370 ವಿಧಿ ರದ್ಧತಿಗೆ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ರದ್ಧತಿಗೆ ವೋಟ್ ಮಾಡಿದ ಎಲ್ಲ ಸಂಸದರನ್ನು ನಾವು ಅಭಿನಂದಿಸೋಣ. ಕಾಶ್ಮೀರಕ್ಕಿರುವ ವಿಶೇಷ ರದ್ಧತಿ ಎಂದೋ ಆಗಬೇಕಿತ್ತು ಎಂದರು.

ಯಾರೋ ಮಾಡಿದ ತಪ್ಪಿನಿಂದ, ಒಂದೇ ಮನೆತನದವರ ಆಡಳಿತದಿಂದ ಕಾಶ್ಮೀರದ ಈ ಸಮಸ್ಯೆಗೆ ಕಾರಣವಾಗಿತ್ತು. ಕಾಶ್ಮೀರದಲ್ಲಿ ಪರಸ್ಥಿತಿ ಬಹಳ ಕೆಟ್ಟದಾಗಿತ್ತು. ನಾನು ಕಾಶ್ಮೀರಕ್ಕೆ ಹೋದಾಗ ಅಲ್ಲಿನ ಪರಸ್ಥಿತಿಯನ್ನು ಕಣ್ಣಾರೆ ಕಂಡಿದ್ದೇನೆ.‌ ಇಂದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರು ಇತಿಹಾಸದಲ್ಲಿ ಉಳಿಯುವಂತಹ ಕೆಲಸ ಮಾಡಿದ್ದಾರೆ ಎಂದರು.

ಕಾಶ್ಮೀರಕ್ಕೆ ನೀಡಿದ್ದ 370 ನೇ ವಿಧಿಯನ್ನು ವಿರೋಧಿಸಿ ನೆಹರು ಸಂಪುಟದಿಂದ ಹೊರ ಬಂದಿದ್ದರು. ಕಾಶ್ಮೀರಕ್ಕೆ ಸಂವಿಧಾನದ 370 ನೇ ವಿಧಿಯ ಬಗ್ಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಹ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಒತ್ತಡದಿಂದ ಅವರು ಅದನ್ನು ಸಂವಿಧಾನದಲ್ಲಿ ಸೇರಿಸಿದ್ದರು. ಇದು ತಾತ್ಕಾಲಿಕ ಎಂದು ಸಹ ಅವರು ಹೇಳಿದ್ದರು. ಕಾಶ್ಮೀರದಲ್ಲಿ 370 ನೇ‌ ಕಲಂ ತೆಗೆದುಹಾಕಿದ ಬಳಿಕ ಅದು ಭಾರತದ ಅವಿಭಾಜ್ಯ ಅಂಗವಾಗಿದೆ. ಅಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿಬಹುದು ಎಂದು ಹೇಳಿದರು. ಪ್ರಮುಖ ಭಾಷಣಕಾರರಾಗಿ ಆಗಮಿಸಿದದ ಕುಡಚಿ ಶಾಸಕ ಪಿ. ರಾಜೀವ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗೂರು ಸೇರಿದಂತೆ ಮೊದಲಾವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details