ಕೊಪ್ಪಳ:ಕೊಪ್ಪಳದಲ್ಲಿ ಕರ್ತವ್ಯದಲ್ಲಿದ್ದ ಸರ್ಕಾರಿ ಇಲಾಖೆಯೊಂದರ ವಾಹನ ಚಾಲಕ ಎಣ್ಣೆ ಖರೀದಿಸಲು ಸರ್ಕಾರಿ ವಾಹನದಲ್ಲೇ ಬಂದ ಘಟನೆ ನಡೆದಿದೆ.
ಸರ್ಕಾರಿ ಇಲಾಖೆಯ ವಾಹನದಲ್ಲೇ ಎಣ್ಣೆ ಕೊಳ್ಳಲು ಬಂದ ಚಾಲಕ - driver
ಸರ್ಕಾರಿ ಇಲಾಖೆಯ ವಾಹನ ಚಾಲಕನೊಬ್ಬ ಇಲಾಖಾ ವಾಹನದಲ್ಲೇ ಮದ್ಯ ಕೊಳ್ಳಲು ವೈನ್ ಶಾಪ್ಗೆ ಬಂದಿದ್ದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಸರ್ಕಾರಿ ಇಲಾಖೆಯ ವಾಹನದಲ್ಲೇ ಎಣ್ಣೆ ಕೊಳ್ಳಲು ಬಂದ ಚಾಲಕ
ಕೆಎ 37, ಜಿ. 101 ನಂಬರ್ ನ ವಾಹನ ಚಾಲಕ ಕರ್ತವ್ಯದಲ್ಲಿ ಇರುವಾಗಲೇ ಮದ್ಯ ಕೊಂಡು ಕೊಳ್ಳಲು ವೈನ್ಸ್ಟೋರ್ಗೆ ಬಂದಿದ್ದ. 'ಕೋವಿಡ್ ಎಮರ್ಜೆನ್ಸಿ ಕರ್ತವ್ಯ'ಎಂಬ ಸ್ಟಿಕ್ಕರ್ ಹೊಂದಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇಲಾಖೆಯ ಸರ್ಕಾರಿ ವಾಹನದ ಚಾಲಕ ಸೈಯ್ಯದ್ ನಗರದ ಬಸ್ ನಿಲ್ದಾಣದ ಬಳಿಯ ಮದ್ಯದಂಗಡಿ ಮುಂದೆ ಜೀಪ್ ನಿಲ್ಲಿಸಿ ಮದ್ಯದಂಗಡಿಗೆ ಮದ್ಯ ಖರೀದಿಸಲು ತೆರಳಿದ.
ಮಾಧ್ಯಮಗಳ ಕ್ಯಾಮೆರಾ ಕಂಡು ಮದ್ಯದಂಗಡಿಯಿಂದ ವಾಪಸ್ ಬಂದು ಅಲ್ಲಿಂದ ವಾಹನ ತೆಗೆದುಕೊಂಡು ಚಾಲಕ ಕಾಲ್ಕಿತ್ತಿದ್ದಾನೆ.