ಕುಷ್ಟಗಿ (ಕೊಪ್ಪಳ):ಕೋವಿಡ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ಸರ್ಕಾರ ತಾಂತ್ರಿಕ ಸಲಹಾ ಸಮಿತಿ ಸಲಹೆ ಸೂಚನೆಗಳನ್ನು ಪರಿಗಣಿಸಬೇಕಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಮನವಿ ಮಾಡಿದರು.
ಸರ್ಕಾರ ತಾಂತ್ರಿಕ ಸಲಹಾ ಸಮಿತಿಯ ಸಲಹೆ ಸೂಚನೆಗಳಿಗೆ ಸ್ಪಂದಿಸಬೇಕಿದೆ: ಶಾಸಕ ಅಮರೇಗೌಡ ಪಾಟೀಲ್ - ಶಾಸಕ ಅಮರೇಗೌಡ ಪಾಟೀಲ
ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ತಾಂತ್ರಿಕ ಸಲಹಾ ಸಮಿತಿ ಸಲಹೆ ಸೂಚನೆಗಳನ್ನು ಪಾಲಿಸಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ವಿನಂತಿ ಮಾಡಿಕೊಂಡಿದ್ದಾರೆ.

kushtagi
ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಸಲಹಾ ಸಮಿತಿ ನೀಡಿದ ಸಲಹೆ ಸೂಚನೆಗಳನ್ನು ಪಾಲಿಸಿದ್ದರೆ ಕೊರೊನಾ 2ನೇ ಅಲೆ ನಿಯಂತ್ರಿಸುವ ಸಾಧ್ಯತೆಗಳಿದ್ದವು. ಈ ಹಿಂದೆಯೂ ಸರ್ಕಾರಕ್ಕೆ ಮನವಿ ಮಾಡಿದ್ದೆ, ಈಗಲೂ ಮನವಿ ಮಾಡುವೆ ಎಂದರು. ಹದಗೆಟ್ಟ ಪರಿಸ್ಥಿತಿಯಲ್ಲಿ ಲಾಕಡೌನ್ ಸಂದರ್ಭದಲ್ಲಿ ಬಡ ವರ್ಗದವರಿಗೆ ಕೇಂದ್ರ ಸರ್ಕಾರ ಮಾಸಿಕ 5 ಸಾವಿರ ನೀಡಬೇಕಿದೆ ಎಂದರು.
ಸರ್ಕಾರ ತಾಂತ್ರಿಕ ಸಲಹಾ ಸಮಿತಿಯ ಸಲಹೆ ಸೂಚನೆಗಳಿಗೆ ಸ್ಪಂದಿಸಬೇಕಿದೆ: ಶಾಸಕ ಅಮರೇಗೌಡ ಪಾಟೀಲ್
ಇನ್ನು ಮೊದಲ ಅಲೆಗಿಂತ ಕೋವಿಡ್ ಎರಡನೇ ಅಲೆ ಭಯಾನಕವಾಗಿದ್ದು, ಸಾರ್ವಜನಿಕರು ಮನೆಯಲ್ಲಿ ಇರಬೇಕು ಎಂದು ಮನವಿ ಮಾಡಿದರು.
Last Updated : May 7, 2021, 5:38 PM IST