ಕರ್ನಾಟಕ

karnataka

ETV Bharat / state

ಶಶಿಕಲಾ ಜೊಲ್ಲೆಗೆ ಕೊಪ್ಪಳ, ಆನಂದ ಸಿಂಗ್​ಗೆ ವಿಜಯನಗರ ಉಸ್ತುವಾರಿ! - Koppal districts in charge ministers change

ಕೊಪ್ಪಳ ಜಿಲ್ಲಾ ಉಸ್ತುವಾರಿ ಬದಲಾವಣೆ ಮಾಡಿ ಸರ್ಕಾರ ಆದೇಶ ನೀಡಿದ್ದು, ಶಶಿಕಲಾ ಜೊಲ್ಲೆ ಅವರಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ನೀಡಿದರೆ, ಆನಂದ ಸಿಂಗ್​​ ಅವರಿಗೆ ವಿಜಯನಗರ ಜಿಲ್ಲಾ ಉಸ್ತುವಾರಿ ನೀಡಲಾಗಿದೆ.

Government has changed the districts in charge ministers
Government has changed the districts in charge ministers

By

Published : Jul 30, 2022, 2:18 PM IST

ಕೊಪ್ಪಳ/ವಿಜಯನಗರ:ಕೊಪ್ಪಳ ಜಿಲ್ಲೆಯು ಉಸ್ತುವಾರಿ ವಹಿಸಿಕೊಂಡಿದ್ದ ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ ಸಚಿವ ಆನಂದ ಸಿಂಗ್ ಅವರನ್ನ ಬದಲಿಸಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ನೀಡಿ ಸರ್ಕಾರ ಆದೇಶಿಸಿದೆ. ಪರ್ಯಾಯವಾಗಿ ಆನಂದ ಸಿಂಗ್​​ ಅವರಿಗೆ ವಿಜಯನಗರ ಜಿಲ್ಲಾ ಉಸ್ತುವಾರಿ ನೀಡಲಾಗಿದೆ.

ಸರ್ಕಾರ ಕಳೆದ ಜನೆವರಿ ತಿಂಗಳಲ್ಲಿ ಸಂಪುಟ ಸಚಿವರಿಗೆ ಉಸ್ತುವಾರಿ ಜವ್ದಾರಿ ವಹಿಸಿತ್ತು. ಅದರಲ್ಲಿ ಸಚಿವ ಹಾಲಪ್ಪ ಆಚಾರ್​​ ಅವರಿಗೆ ತವರು ಜಿಲ್ಲೆಯಿಂದ ಧಾರವಾಡ ಜಿಲ್ಲಾ ಉಸ್ತುವಾರಿ ನೀಡಲಾಗಿತ್ತು. ಆನಂದ ಸಿಂಗ್​​ ಅವರಿಗೆ ತವರು ಜಿಲ್ಲೆ ವಿಜಯನಗರ ಬದಲಾಗಿ ಕೊಪ್ಪಳ ಜಿಲ್ಲೆಯ ಉಸ್ತುವಾರಿ ನೀಡಲಾಗಿತ್ತು.

ಅದರೆ, ಉಸ್ತುವಾರಿ ವಹಿಸಿ ಏಳು ತಿಂಗಳು ಕಳೆಯುವುದರೊಳಗೆ ಶಶಿಕಾಲಾ ಜೊಲ್ಲೆ ಅವರಿಗೆ ಮತ್ತೆ ಕೊಪ್ಪಳ, ಆನಂದ ಸಿಂಗ್​ಗೆ ವಿಜಯನಗರ ಉಸ್ತುವಾರಿ ನೀಡಿ ಸರ್ಕಾರ ಮರು ಆದೇಶ ಮಾಡಿದೆ. ಸ್ವಂತ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸಚಿವ ಆನಂದ ಸಿಂಗ್ ಉಸ್ತುವಾರಿ ಬದಲಾಯಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಶಶಿಕಲಾ ಜೊಲ್ಲೆ ಅವರು ವಿಜಯನಗರದತ್ತ ಸುಳಿಯದ ಕಾರಣ ತೀವ್ರ ಟೀಕೆಗೆ ಗುರಿಯಾಗಿತ್ತು. ಇದೀಗ ವಿಜಯನಗರ ಜಿಲ್ಲೆಗೆ ಉಸ್ತವಾರಿಯಾಗಿ ಸಚಿವ ಸಿಂಗ್ ಅವರನ್ನು ನೇಮಕ ಮಾಡಿರುವುದು ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಸಂಭ್ರಮಕ್ಕೆ ಕಾರಣವಾಗಿದೆ.

ABOUT THE AUTHOR

...view details