ಕೊಪ್ಪಳ: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದ ತಾಲೂಕಿನ ಮೋರನಾಳ ಗ್ರಾಮದ ತೊಗಲುಗೊಂಬೆ ಕಲಾವಿದ ಕೇಶಪ್ಪ ಶಿಳ್ಳಿಕ್ಯಾತರ್ ಅವರ ಹೆಸರನ್ನ ಸರ್ಕಾರ ಪ್ರಶಸ್ತಿ ಪಟ್ಟಿಯಿಂದ ಕೈಬಿಟ್ಟು ಆದೇಶ ಮಾಡಿದೆ.
ರಾಜ್ಯೋತ್ಸವ ಪ್ರಶಸ್ತಿಯಿಂದ ಕೇಶಪ್ಪ ಶಿಳ್ಳಿಕ್ಯಾತರ್ ಹೆಸರು ಹಿಂಪಡೆದ ಸರ್ಕಾರ - Keshappa shillikyatar
ಕೇಶಪ್ಪ ಅವರ ಆಧಾರ್ ಕಾರ್ಡ್ ಮಾಹಿತಿ ಪ್ರಕಾರ ಅವರಿಗೆ 46 ವರ್ಷ ವಯಸ್ಸಾಗಿದ್ದು, ರಾಜ್ಯೋತ್ಸವ ಪ್ರಶಸ್ತಿಗೆ 60ವರ್ಷ ಪರಿಗಣಿಸಲಾಗುತ್ತದೆ. ಹೀಗಾಗಿ, ಅವರ ವಯಸ್ಸು 46 ಇರುವುದರಿಂದ ಕೇಶಪ್ಪ ಅವರಿಗೆ ಘೋಷಿಸಲಾಗಿದ್ದ ರಾಜ್ಯೋತ್ಸವ ಪ್ರಶಸ್ತಿಯನ್ನು ರದ್ದುಪಡಿಸಲಾಗಿದೆ..
![ರಾಜ್ಯೋತ್ಸವ ಪ್ರಶಸ್ತಿಯಿಂದ ಕೇಶಪ್ಪ ಶಿಳ್ಳಿಕ್ಯಾತರ್ ಹೆಸರು ಹಿಂಪಡೆದ ಸರ್ಕಾರ Keshappa shillikyatar](https://etvbharatimages.akamaized.net/etvbharat/prod-images/768-512-9462128-thumbnail-3x2-koppal.jpg)
ಕೇಶಪ್ಪ ಅವರ ಆಧಾರ್ ಕಾರ್ಡ್ ಮಾಹಿತಿ ಪ್ರಕಾರ ಅವರಿಗೆ 46 ವರ್ಷ ವಯಸ್ಸಾಗಿದ್ದು, ರಾಜ್ಯೋತ್ಸವ ಪ್ರಶಸ್ತಿಗೆ 60ವರ್ಷ ಪರಿಗಣಿಸಲಾಗುತ್ತದೆ. ಹೀಗಾಗಿ, ಅವರ ವಯಸ್ಸು 46 ಇರುವುದರಿಂದ ಕೇಶಪ್ಪ ಅವರಿಗೆ ಘೋಷಿಸಲಾಗಿದ್ದ ರಾಜ್ಯೋತ್ಸವ ಪ್ರಶಸ್ತಿಯನ್ನು ರದ್ದುಪಡಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್ ಕೆ ಸುರೇಶಬಾಬು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಕೋಟಾದಲ್ಲೀಗ ರಂಗಭೂಮಿ ಕಲಾವಿದೆ ಜಿ. ವಂದನಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ವಿಷಯ ತಿಳಿಯುತ್ತಿದ್ದಂತೆ ಖುಷಿಯಾಗಿದ್ದ ಕೇಶಪ್ಪ ಹಾಗೂ ಅವರ ಕುಟುಂಬಸ್ಥರು ಸದ್ಯ ಹೆಸರನ್ನು ಹಿಂಪಡೆದಿರುವ ಆದೇಶದಿಂದ ಬೇಸರ ವ್ಯಕ್ತಪಡಿಸಿದ್ದಾರೆ.