ಗಂಗಾವತಿ : ತಾಲೂಕಿನ ಮಲ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜಶೇಖರ ಸಿ.ಎಚ್. ನಾರಿನಾಳ ಅವರ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿರುವ ಕಿಡಿಗೇಡಿಗಳು ಮೆಸೆಂಜರ್ನಲ್ಲಿ ವೈದ್ಯರ ಸ್ನೇಹಿತರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ವೈದ್ಯರ ಸ್ನೇಹಿತರಿಂದ ಈ ವಿಚಾರ ಬಯಲಿಗೆ ಬಂದಿದೆ. ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿರುವ ಕಿಡಿಗೇಡಿಗಳು, ತುರ್ತಾಗಿ ಹಣದ ಅಗತ್ಯವಿದೆ. ದಯವಿಟ್ಟು ನಿಮ್ಮ ಕೈಲಾದಷ್ಟು ಮೊತ್ತವನ್ನು ನನ್ನ ಖಾತೆಗೆ ಜಮೆ ಮಾಡಿ ಎಂದು ಪೋಸ್ಟ್ ಹಾಕಿದ್ದಾರೆ. ಇದರಿಂದ ವೈದ್ಯನ ಸ್ನೇಹಿತ ಹಾಗೂ ನಗರಸಭೆ ಸದಸ್ಯ ಎಫ್. ರಾಘವೇಂದ್ರ ಸೇರಿದಂತೆ ಸಾಕಷ್ಟು ಜನ ಹಣ ಹಾಕಿದ್ದಾರೆ.