ಕರ್ನಾಟಕ

karnataka

ETV Bharat / state

ಅಂಜನಾದ್ರಿ ಶಿಲಾಪೂಜೆಗೆ ಆಗಮಿಸಿದ ರಾಜ್ಯಪಾಲ ವಜುಭಾಯಿ ವಾಲಾ - ಕೊಪ್ಪಳ ಸುದ್ದಿ

ಆನೆಗುಂದಿ ಬಳಿಯ ಅಂಜನಾದ್ರಿಯಲ್ಲಿ ನಡೆಯಲಿರುವ ಶಿಲಾಪೂಜೆಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಪ್ಪಳಕ್ಕೆ ಹೆಲಿಕಾಪ್ಟರ್​ ಮೂಲಕ ಆಗಮಿಸಿದ್ದಾರೆ.

Governer Vajubhai Vala visits Koppala
ಶಿಲಾಪೂಜೆಗೆ ಆಗಮಿಸಿದ ರಾಜ್ಯಪಾಲ

By

Published : Jan 10, 2021, 11:55 AM IST

Updated : Jan 10, 2021, 2:24 PM IST

ಕೊಪ್ಪಳ: ಆನೆಗುಂದಿ ಬಳಿಯ ಅಂಜನಾದ್ರಿಯಲ್ಲಿ ನಡೆಯಲಿರುವ ಶಿಲಾಪೂಜೆಯಲ್ಲಿ ಭಾಗವಹಿಸಲು ರಾಜ್ಯಪಾಲ ವಜುಭಾಯಿ ವಾಲಾ ಜಿಲ್ಲೆಗೆ ಆಗಮಿಸಿದ್ದಾರೆ.

ಶಿಲಾಪೂಜೆಗೆ ಆಗಮಿಸಿದ ರಾಜ್ಯಪಾಲ

ಆನೆಗುಂದಿ ಬಳಿ ಇರುವ ಹೆಲಿಪ್ಯಾಡ್‍ಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಬಂದಿಳಿದಿದ್ದು, ಇಲ್ಲಿಂದ ರಸ್ತೆ ಮಾರ್ಗವಾಗಿ ಅಂಜನಾದ್ರಿಗೆ ತೆರಳಿದ್ದಾರೆ. ಶಿಲಾಪೂಜೆಗೆ ಆಗಮಿಸಿದ ವಜುಭಾಯಿ ವಾಲಾರನ್ನು ಆನೆಗುಂದಿಯ ಹೆಲಿಪ್ಯಾಡ್‍ನಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕ ಪರಣ್ಣ ಮುನವಳ್ಳಿ ಹಾಗೂ ಅಧಿಕಾರಿಗಳು ಸ್ವಾಗತಿಸಿದರು.

ಅಂಜನಾದ್ರಿಯಲ್ಲಿ ಸುಮಾರು ಒಂದು ಗಂಟೆ ಕಾಲ ನಡೆಯಲಿರುವ ಶಿಲಾಪೂಜೆಯಲ್ಲಿ ರಾಜ್ಯಪಾಲರು ಭಾಗವಹಿಸಲಿದ್ದಾರೆ.

Last Updated : Jan 10, 2021, 2:24 PM IST

ABOUT THE AUTHOR

...view details