ಕೊಪ್ಪಳ: ಬಜೆಟ್ ಮಂಡನೆಗೆ ಎಲ್ಲ ಸಿದ್ಧತೆ ನಡೆದಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಮಾ. 3 ಮತ್ತು 4 ರಂದು ಸಂವಿಧಾನದ ಬಗ್ಗೆ ಎಲ್ಲ ಸದಸ್ಯರು ಮಾತನಾಡುತ್ತಾರೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
ಯಡಿಯೂರಪ್ಪಗೆ ವಯಸ್ಸಾಯ್ತು ಅಂದವರಿಗೆ ಒಳ್ಳೆಯದಾಗಲಿ: ಸಿಎಂ ಬಿಎಸ್ವೈ - ಕೊಪ್ಪಳದಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ
ಬಜೆಟ್ ಮಂಡನೆಗೆ ಎಲ್ಲ ಸಿದ್ಧತೆ ನಡೆದಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಮಾ. 3 ಮತ್ತು 4 ರಂದು ಸಂವಿಧಾನದ ಬಗ್ಗೆ ಎಲ್ಲ ಸದಸ್ಯರು ಮಾತನಾಡುತ್ತಾರೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
![ಯಡಿಯೂರಪ್ಪಗೆ ವಯಸ್ಸಾಯ್ತು ಅಂದವರಿಗೆ ಒಳ್ಳೆಯದಾಗಲಿ: ಸಿಎಂ ಬಿಎಸ್ವೈ ಕೊಪ್ಪಳದಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ, CM BSYadiyurappa statement in Koppal](https://etvbharatimages.akamaized.net/etvbharat/prod-images/768-512-6207541-thumbnail-3x2-cm.jpg)
ಕೊಪ್ಪಳದಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ
ಸಿಎಂ ಯಡಿಯೂರಪ್ಪ ಹೇಳಿಕೆ
ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಮಾತನಾಡಿದ ಬಿಎಸ್ವೈ, ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸುವ ಐತಿಹಾಸಿಕ ಕಾರ್ಯಕ್ರಮ ಇದಾಗಿದೆ. ಸಂವಿಧಾನದ ಕನ್ನಡ ಅನುವಾದವನ್ನು ಎಲ್ಲ ಶಾಸಕರಿಗೂ ತಲುಪಿಸಿದ್ದೇವೆ. ಅಧ್ಯಯನ ಮಾಡಿಕೊಂಡು ಬಂದು ಎಲ್ಲರೂ ಮಾತನಾಡಬೇಕೆಂದು ತಿಳಿಸಲಾಗಿದೆ ಎಂದರು.
ಯಡಿಯೂರಪ್ಪಗೆ ವಯಸ್ಸಾಗಿದೆ ಎಂದು ಬಿಜೆಪಿಯ ಹಲವು ಮುಖಂಡರು ವರಿಷ್ಠರಿಗೆ ದೂರು ನೀಡಿರುವ ಕುರಿತ ಪ್ರಶ್ನೆಗೆ ಗರಂ ಆದ ಸಿಎಂ, ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿ ಅಲ್ಲಿಂದ ಹೊರಟು ಹೋದರು.