ಕರ್ನಾಟಕ

karnataka

ETV Bharat / state

ಕೊಪ್ಪಳ: 113 ಅಡಿ ಆಳದಲ್ಲಿ ಚಿನ್ನದ ನಿಕ್ಷೇಪ ಪತ್ತೆ

ಕುಷ್ಟಗಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ವಿಜ್ಞಾನಿಗಳ ತಂಡ ಅಧ್ಯಯನದಲ್ಲಿ ತೊಡಗಿದ್ದಾರೆ.

gold-sediment-found-near-koppal
113 ಅಡಿ ಆಳದಲ್ಲಿ ಚಿನ್ನದ ನಿಕ್ಷೇಪ ಪತ್ತೆ

By

Published : Oct 14, 2021, 9:34 AM IST

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೆರೆ ಬಳಿಯ ನಾರಿನಾಳ ಗ್ರಾಮದ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಕಳೆದ ಮೂರು ದಿನಗಳಿಂದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ(GSI) ವಿಜ್ಞಾನಿಗಳ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ.

ನಾರಿನಾಳ ಬಳಿಯ ಜಮೀನಿನಲ್ಲಿ 113 ಅಡಿ ಆಳದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. 2017ರಲ್ಲಿ ಇಲ್ಲಿನ ಭಾಗದ ಮ್ಯಾದರಡೊಕ್ಕಿಯಲ್ಲಿ ಕಬ್ಬಿಣದ ಅದಿರು ಪತ್ತೆಯಾಗಿತ್ತು. ನಾರಿನಾಳ ಬಳಿಯ ಚಿನ್ನ ನಿಕ್ಷೇಪ ಕುರಿತು ಇನ್ನಷ್ಟು ಅಧ್ಯಯನ ನಡೆಸಲಿದ್ದು, ವಿಜ್ಞಾನಿಗಳ ತಂಡ ಬೀಡುಬಿಟ್ಟಿದೆ.

ABOUT THE AUTHOR

...view details