ಕುಷ್ಟಗಿ (ಕೊಪ್ಪಳ): ಕೇಂದ್ರ ಭೂಗರ್ಭ ಇಲಾಖೆಯ ಸಂಶೋಧನಾ ಸಿಬ್ಬಂದಿ ತಾಲೂಕಿನ ನಾರಿನಾಳ ಗ್ರಾಮದಲ್ಲಿ ಬಿಡಾರ ಹೂಡಿದೆ. ಚಿನ್ನದ ನಿಕ್ಷೇಪ ಪತ್ತೆಯಲ್ಲಿ ಈ ತಂಡ ನಿರತವಾಗಿದೆ. ಆದ್ರೆ, ಈ ತಂಡ ತನ್ನ ಪಾಡಿಗೆ ಚಿನ್ನದ ಅದಿರು ಪರೀಕ್ಷೆ ಕಾರ್ಯ ನಡೆಸಿದ್ದರೂ ಜನ ಏನೇನೋ ವದಂತಿಗಳು ಹಬ್ಬಿಸುತ್ತಿದ್ದಾರೆನ್ನುವ ಆರೋಪಗಳು ಕೇಳಿ ಬಂದಿವೆ.
ಕಳೆದ ಒಂದು ವಾರದಿಂದ ನಾರಿನಾಳ ಹೊರವಲಯದ ಸ.ನಂ.31, 32ರಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು ಮಣ್ಣನ್ನು ಅಗೆದು ಪರೀಕ್ಷೆ ನಡೆಸಿದ್ದಾರೆ. ಸಮಾರು 150 ಅಡಿಯಷ್ಟು ಒಳಗಿನ ಮಣ್ಣನ್ನು ಅಗೆದು ಪರೀಕ್ಷೆಗೆ ಒಳಪಡಿಸಿದ್ದಾರೆ.
ಒಂದು ಮೂಲದ ಪ್ರಕಾರ ಬಂಗಾರದ ನಿಕ್ಷೇಪ ಇದೆಯಾದರೂ ಉತ್ಪಾದನೆಗಿಂತ ಖರ್ಚು ಹೆಚ್ಚಿಗೆ ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕೇಳಬೇಕೆಂದರೆ ಬಂದಿರುವ ವಿಜ್ಞಾನಿಗಳು ಸದ್ಯ ದಸರಾ ಹಬ್ಬಕ್ಕೆ ಊರಿಗೆ ಹೋಗಿದ್ದಾರೆ ಎಂಬುದಾಗಿ ಶೆಡ್ನಲ್ಲಿದ್ದ ರಂಗಸ್ವಾಮಿ ಎಂಬ ವ್ಯಕ್ತಿ ತಿಳಿಸಿದ್ದಾರೆ.