ಕರ್ನಾಟಕ

karnataka

ETV Bharat / state

ನಕಲಿ ಬಂಗಾರದ ನಾಣ್ಯ ನೀಡಿ ವಂಚನೆ: ಚಾಲಾಕಿಗಳು ಅಂದರ್​​ - ಮೋಟರ್ ಸೈಕಲ್ ಜಪ್ತಿ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ವಂಚಿಸಿದ್ದ‌ ಮೂವರು ಆರೋಪಿಗಳು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ವಂಚಿಸಿದ್ದ‌ ಆರೋಪಿಗಳು ಇದೀಗ ಅಂದರ್

By

Published : Sep 18, 2019, 6:14 PM IST

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ವಂಚಿಸಿದ್ದ‌ ಮೂವರು ಆರೋಪಿಗಳು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಜಿಲ್ಲೆಯ ಕುಷ್ಟಗಿ ತಾಲೂಕಿನ ಕಾಟಾಪುರ ಗ್ರಾಮದಲ್ಲಿ ಮಲ್ಲಪ್ಪ ಎಂಬುವವರಿಗೆ ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ಮೂವರು ವಂಚಿಸಿ ಪರಾರಿಯಾಗಿದ್ದರು. ಈ ಬಗ್ಗೆ ಮಲ್ಲಪ್ಪ ಹನುಮಸಾಗರ ಠಾಣೆಯಲ್ಲಿ ದೂರು ನೀಡಿದ್ದರು.

ಆರೋಪಿಗಳ ಜಾಡು ಹಿಡಿದು ತಲಾಶ್ ನಡೆಸಿದ ಹನುಮಸಾಗರ ಠಾಣೆಯ ಪೊಲೀಸರು ಕೂಡ್ಲಗಿ ಮೂಲದ ಮಾರುತಿ ಕೊರವರ, ಹರಪನಹಳ್ಳಿ ಮೂಲದ ಹನುಮಂತ ಕರಡೇರ ಹಾಗೂ ಮಂಜಪ್ಪ ಅರಸಿಕೆರೆ ಎಂಬುವವರನ್ನು ಬಂಧಿಸಿದ್ದಾರೆ‌. ಬಂಧಿತ ಆರೋಪಿಗಳಿಂದ 50 ಸಾವಿರ ರೂಪಾಯಿ ನಗದು, 3 ಮೊಬೈಲ್ ಹಾಗೂ ಒಂದು ಮೋಟರ್ ಸೈಕಲ್ ಜಪ್ತಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details