ಕುಷ್ಟಗಿ (ಕೊಪ್ಪಳ):ಕುಷ್ಟಗಿ ಪಟ್ಟಣದ 4ನೇ ವಾರ್ಡ್‌ನಲ್ಲಿ ಗಿಳಿಗಳ ದಾಳಿಗೆ ಗೊರವಂಕ ಹಕ್ಕಿಯ ಕತ್ತು ಭಾಗದಲ್ಲಿ ಗಾಯವಾಗಿ ಅಸ್ವಸ್ಥಗೊಂಡಿತ್ತು. ಇದನ್ನು ಗಮನಿಸಿದ ಕುಷ್ಟಗಿ ಪುರಸಭೆ ಸದಸ್ಯ ಕಲ್ಲೇಶ ತಾಳದ ಅವರ ಪುತ್ರಿ ಪೂರ್ವಿ, ಗಾಯಗೊಂಡ ಹಕ್ಕಿಯನ್ನು ಮನೆಗೆ ತಂದು ಆರೈಕೆ ಮಾಡಿದ್ದಾಳೆ.
ಗೊರವಂಕ ಹಕ್ಕಿಗೆ ಪುಟ್ಟ ಪೋರಿಯ ಆರೈಕೆ - ಗೊರವಂಕ ಹಕ್ಕಿ ಪ್ರಾಣ ಉಳಿಸಿದ ಕುಷ್ಟಗಿಯ ಬಾಲಕಿ
ಪಟ್ಟಣದ ಎಸ್.ವಿ.ಸಿ. ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವ ಪೂರ್ವಿ ಪಕ್ಷಿ ಬಗ್ಗೆ ತೋರಿದ ದಯೆಯಿಂದ ಹಕ್ಕಿಯೊಂದು ಸಾವಿನಿಂದ ಪಾರಾಗಿದೆ.
![ಗೊರವಂಕ ಹಕ್ಕಿಗೆ ಪುಟ್ಟ ಪೋರಿಯ ಆರೈಕೆ Girl saved injured bird in Kushtagi](https://etvbharatimages.akamaized.net/etvbharat/prod-images/768-512-12197443-thumbnail-3x2-ddff.jpg)
ಗಿಳಿಗಳ ದಾಳಿಗೆ ಗಾಯಗೊಂಡ ಗೊರವಂಕ ಹಕ್ಕಿಗೆ ಆರೈಕೆ
ಗೊರವಂಕ ಹಕ್ಕಿಗೆ ಆರೈಕೆ
ಬಾಲಕಿ ಹಕ್ಕಿಗೆ ಡಿಸ್ಪೋಜಿಬಲ್ ಸಿರಿಂಜ್ ಬಳಸಿ ನೀರುಣಿಸಿದ್ದಾಳೆ. ಇದರಿಂದ ಹಕ್ಕಿ ಚೇತರಿಸಿಕೊಂಡಿದ್ದು, ಸ್ಥಳೀಯ ಪಶು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ತಮ್ಮ ತೋಟದ ಮನೆಯಲ್ಲಿರಿಸಿದ್ದಾಳೆ.
ಪಟ್ಟಣದ ಎಸ್.ವಿ.ಸಿ. ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವ ಪೂರ್ವಿ ಪಕ್ಷಿ ಬಗ್ಗೆ ತೋರಿದ ದಯೆಯಿಂದ ಹಕ್ಕಿಯೊಂದು ಸಾವಿನಿಂದ ಪಾರಾಗಿದೆ.