ಗಂಗಾವತಿ : ಅಮೆರಿಕದಿಂದ ಆಗಮಿಸಿದ ಯುವತಿಯಲ್ಲಿ ಕೋವಿಡ್ 19 ಕಂಡುಬಂದಿದೆ. ತಾಲ್ಲೂಕಿನ ಬಸವಪಟ್ಟಣದ ಯುವತಿಯಲ್ಲಿ ಸೋಂಕು ಕಂಡುಬಂದಿದ್ದು, ಮೂರನೇ ಅಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ.
ಅಮೆರಿಕದಿಂದ ಆಗಮಿಸಿದ ಗಂಗಾವತಿ ಯುವತಿಗೆ ಕೋವಿಡ್ ಸೋಂಕು - ಅಮೆರಿಕಾದಿಂದ ಬಂದ ಯುವತಿ
ಅಮೆರಿಕದಿಂದ ಮರಳಿದ ಗಂಗಾವತಿಯ ಯುವತಿಯಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ. ಯುವತಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

ಅಮೆರಿಕಾದಿಂದ ಬಂದ ಗಂಗಾವತಿ ಯುವತಿಗೆ ಕೊರೊನಾ ಪೊಸಿಟಿವ್
ಯುವತಿಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಪಾಸಿಟಿವ್ ಬಂದಿದ್ದು ಹೋಂ ಕ್ವಾರಂಟೈನ್‌ನಲ್ಲಿರಲು ಅಧಿಕಾರಿಗಳು ಸೂಚಿಸಿದ್ದಾರೆ. ಆಕೆಯಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ಬಿಎಫ್-7 ಉಪತಳಿ ನಿಯಂತ್ರಣಕ್ಕೆ ಸರ್ಕಾರ ಸರ್ವ ಸನ್ನದ್ದ: ಸಚಿವ ಸುಧಾಕರ್