ಗಂಗಾವತಿ (ಕೊಪ್ಪಳ):ಸ್ನೇಹಿತೆಯ ಮನೆಗೆ ಹೋಗಿ ಬರುವುದಾಗಿ ಪಾಲಕರಿಗೆ ತಿಳಿಸಿ ಮನೆಯಿಂದ ಹೊರಹೋಗಿದ್ದ ಯುವತಿಯೊಬ್ಬಳು ಎರಡು ದಿನಗಳಿಂದ ನಾಪತ್ತೆಯಾಗಿರುವ ಘಟನೆ ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿಹೈದರ ಗ್ರಾಮದಲ್ಲಿ ನಡೆದಿದೆ.
ಸ್ನೇಹಿತೆಯ ಮನೆಗೆ ತೆರಳಿದ್ದ ಯುವತಿ ನಾಪತ್ತೆ: ಪೊಲೀಸರ ತಲಾಷ್ - ಪೊಲೀಸರ ತಲಾಷ್
ಸ್ನೇಹಿತೆಯ ಮನೆಗೆ ಹೋಗಿ ಬರುವುದಾಗಿ ಪಾಲಕರಿಗೆ ತಿಳಿಸಿ ಮನೆಯಿಂದ ಹೊರಹೋಗಿದ್ದ ಯುವತಿಯೊಬ್ಬಳು ನಾಪತ್ತೆಯಾಗಿದ್ದಾಳೆ.
![ಸ್ನೇಹಿತೆಯ ಮನೆಗೆ ತೆರಳಿದ್ದ ಯುವತಿ ನಾಪತ್ತೆ: ಪೊಲೀಸರ ತಲಾಷ್ girl missing](https://etvbharatimages.akamaized.net/etvbharat/prod-images/768-512-8834976-158-8834976-1600341388699.jpg)
girl missing
ಕಾಣೆಯಾದ ಯುವತಿಯನ್ನು ಕನಕಗಿರಿ ನಿವಾಸಿ ಮಲ್ಲಮ್ಮ ಅಶೋಕ ಜಾಡಿ (19) ಎಂದು ಗುರುತಿಸಲಾಗಿದೆ. ಈ ಬಗ್ಗೆ ಸ್ವತಃ ಯುವತಿಯ ತಂದೆ ಹುಲಿಹೈದರದ ಕಟ್ಟಿಗೆ ವ್ಯಾಪಾರಿ ಅಶೋಕ ಜಾಡಿ ಕನಕಗಿರಿ ಪೊಲೀಸರಿಗೆ ದೂರು ನೀಡಿ ಮಗಳನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.
ವ್ಯಾಪಾರದ ಉದ್ದೇಶಕ್ಕೆ ತಾವು ಹುಲಿಹೈದರದಲ್ಲಿ ವಾಸ ಮಾಡುತ್ತಿದ್ದು, ಮಗಳು ಕನಕಗಿರಿಯ ತಮ್ಮ ಇನ್ನೊಂದು ಮನೆಯಲ್ಲಿ ಇರುತ್ತಿದ್ದಳು. ಆದರೆ ಸೆ.14ರಂದು ಸಂಜೆ ಮನೆಯಿಂದ ಹೊರಗೆ ಹೋಗಿದ್ದು, ವಾಪಸ್ ಬಂದಿಲ್ಲ. ಹುಡುಕಿ ಕೊಡುವಂತೆ ಪೊಲೀಸರಿಗೆ ಯುವತಿಯ ತಂದೆ ಮನವಿ ಮಾಡಿದ್ದಾರೆ.