ಕೊಪ್ಪಳ: ಕರ್ತವ್ಯದಲ್ಲಿದ್ದಾಗಲೇ ಹುತಾತ್ಮರಾದ ತನ್ನ ತಂದೆಯನ್ನು ನೆನೆದು ಬಾಲಕಿಯೊಬ್ಬಳು ಮೂರ್ಛೆ ಹೋದ ಘಟನೆ ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ನಡೆದ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆಯಿತು.
ಹುತಾತ್ಮ ದಿನಾಚರಣೆ ವೇಳೆ ತಂದೆಯ ನೆನೆದು ಮೂರ್ಛೆ ಹೋದ ಬಾಲಕಿ - ಕೊಪ್ಪಳದಲ್ಲಿ ಮೂರ್ಛೆ ಹೋದ ಬಾಲಕಿ
ಕೊಪ್ಪಳ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ನಡೆದ ಪೊಲೀಸ್ ಹುತಾತ್ಮ ದಿನಾಚರಣೆ ವೇಳೆ, ಬಾಲಕಿಯೊಬ್ಬಳು ಮೂರ್ಛೆ ಹೋದ ಘಟನೆ ನಡೆಯಿತು.
ತಂದೆಯನ್ನು ನೆನೆದು ಮೂರ್ಛೆ ಹೋದ ಬಾಲಕಿ
ಕಾರ್ಯಕ್ರಮದಲ್ಲಿ ಭಾಗವಹಿಸಲು, ಜಿಲ್ಲೆಯಲ್ಲಿ ಕಳೆದ ವರ್ಷ ಹುತಾತ್ಮರಾದ ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರು ಆಗಮಿಸಿದ್ದರು. ಹುತಾತ್ಮ ಸಿಬ್ಬಂದಿ ಕುಟುಂಬಸ್ಥರನ್ನು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ ಗೌರವಿಸಲು ಮುಂದಾದಾಗ ಕುಟುಂಬಸ್ಥರು ಕಣ್ಣೀರಿಟ್ಟರು.
ಈ ಸಂದರ್ಭದಲ್ಲಿ ಹುತಾತ್ಮ ಪೊಲೀಸ್ ಅಧಿಕಾರಿಯೊಬ್ಬರ ಮಗಳು, ತನ್ನ ತಂದೆಯನ್ನು ನೆನೆದು ಅಳುತ್ತಾ ಮೂರ್ಛೆ ಹೋದಳು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಬಾಲಕಿಯನ್ನು ಆರೈಕೆ ಮಾಡಿ ಸಮಾಧಾನಪಡಿಸಿದರು.