ಕೊಪ್ಪಳ : ಹೊಲದಲ್ಲಿದ್ದ ಹೊಂಡಕ್ಕೆ ನೀರು ತರಲು ಹೋಗಿದ್ದ ಬಾಲಕಿಯೋರ್ವಳು ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಹಾಳ ಗ್ರಾಮದಲ್ಲಿ ಇಂದು ನಡೆದಿದೆ. ತಲ್ಲೂರು ತಾಂಡಾ ಮೂಲದ ನಂದಿನಿ ಎಂಬ ಎಂಟು ವರ್ಷದ ಬಾಲಕಿ ಮೃತಳು.
ತಂದೆ ತಾಯಿಯೊಂದಿಗೆ ಕುರಿ ಕಾಯಲು ಬಂದಿದ್ದ ಈ ಬಾಲಕಿ ಇಂದು ಬೆಳಗ್ಗೆ ನೀರು ತರಲೆಂದು ಜಮೀನಿನಲ್ಲಿದ್ದ ಹೊಂಡಕ್ಕೆ ಬಂದಿದ್ದಳು. ಆಗ ಕಾಲು ಜಾರಿ ಬಿದ್ದು ಬಾಲಕಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.