ಗಂಗಾವತಿ (ಕೊಪ್ಪಳ): ಕೊರೊನಾದ ತುರ್ತು ಪರಿಸ್ಥಿತಿ ನಿಭಾಯಿಸಲು ಕಳೆದೊಂದು ತಿಂಗಳಿಂದ ಕ್ಷೇತ್ರದ್ಯಾಂತ ಸುತ್ತಾಡಿದ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ, ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಭೇಟಿ ಕೊಟ್ಟು 'ಜನರಲ್ ಚೆಕಪ್' ಮಾಡಿಸಿಕೊಂಡರು.
ದಂತಬಾಧೆ: ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕ ಪರಣ್ಣ ಮುನವಳ್ಳಿಗೆ ಚೆಕಪ್ - ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ
ಸಾಮಾನ್ಯ ದಂತಬಾಧೆಗೆ ಒಳಗಾಗಿದ್ದ ಶಾಸಕರಿಗೆ, ಆಸ್ಪತ್ರೆಯ ದಂತ ವೈದ್ಯರು ಚಿಕಿತ್ಸೆ ನೀಡಿದರು. ಬಳಿಕ ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ ಹಾಗೂ ಕಿವಿ, ಮೂಗು ಮತ್ತು ಗಂಟಲು ತಜ್ಞರು ತಪಾಸಣೆ ನಡೆಸಿದರು.

mla
ಶಾಸಕರ ಜನರಲ್ ಚೆಕಪ್
ಎರಡು ಮೂರು ದಿನಗಳಿಂದ ಸಾಮಾನ್ಯ ದಂತಬಾಧೆಗೆ ಒಳಗಾಗಿದ್ದ ಶಾಸಕರಿಗೆ, ಆಸ್ಪತ್ರೆಯ ದಂತ ವೈದ್ಯ ಭಾನುಪ್ರಸಾದ್ ಸಾಮಾನ್ಯ ಚಿಕಿತ್ಸೆ ನೀಡಿದರು. ಬಳಿಕ ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ ಈಶ್ವರ ಸವುಡಿ ಹಾಗೂ ಕಿವಿ, ಮೂಗು ಮತ್ತು ಗಂಟಲು ತಜ್ಞ ಮಲ್ಲಿಕಾರ್ಜುನ ತಪಾಸಣೆ ನಡೆಸಿದರು.
ಈ ಸಂದರ್ಭದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ, ನಿಯಮಿತವಾಗಿ ಜನರಲ್ ಚೆಕಪ್ ಮಾಡಿಸಿಕೊಳ್ಳುತ್ತಿರುತ್ತೇನೆ. ಆದರೆ ಕಳೆದ ಒಂದು ತಿಂಗಳಿಂದ ಸತತ ಓಡಾಡುತ್ತಿರುವುದರಿಂದ ಸಾಮಾನ್ಯ ತಪಾಸಣೆ ಮಾಡಿಸಿಕೊಳ್ಳಲಾಗಿರಲಿಲ್ಲ. ಈಗ ಮಾಡಿಸಿದೆ ಎಂದರು