ಕೊಪ್ಪಳ:ಇಲ್ಲಿನ ಗವಿಮಠದ ಪೀಠಾಧಿಪತಿ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ತಮ್ಮ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಾರೆ. ಅವರಿಗೆ ಮಕ್ಕಳೆಂದರೆ ಎಲ್ಲಿಲ್ಲದ ಅಕ್ಕರೆ. ಮಕ್ಕಳೊಂದಿಗೆ ಅವರು ಮಗುವಾಗಿ ಬಿಡುತ್ತಾರೆ. ಮಗುವನ್ನು ಆಟವಾಡಿಸುತ್ತಾ ಮಗುವಾಗಿರುವ ಶ್ರೀಗಳ ವಿಡಿಯೋ ವೈರಲ್ ಆಗಿದೆ.
ಮಗುವಿನೊಂದಿಗೆ ಮಗುವಾದ ಗವಿಶ್ರೀ.. ಮಹಾರಥೋತ್ಸವ ಹಿನ್ನೆಲೆ ತಾವೇ ರಥ ಸ್ವಚ್ಛ ಮಾಡಿದ ಗುರುಗಳು! - ರಥ ಸ್ವಚ್ಛಗೊಳಿಸಿದ ಗವಿಶ್ರೀಗಳು
ತಮ್ಮ ಕಾರ್ಯಗಳ ಬಿಡುವಿನ ನಡುವೆ ಗವಿ ಶ್ರೀಗಳು ಮಗುವಿನೊಂದಿಗೆ ಮಗುವಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಮಗುವಿನೊಂದಿಗೆ ಮಗುವಾದ ಗವಿಶ್ರೀಗಳು
ಬಿಜೆಪಿ ಮುಖಂಡ ನವೀನ ಗುಳಗಣ್ಣನವರ ಕುಟುಂಬದ ಚಿಕ್ಕ ಮಗುವನ್ನು ಕಾರ್ ಬಾನೇಟ್ ಮೇಲೆ ಕೂಡಿಸಿ ಸ್ವಾಮೀಜಿ ಆಟವಾಡಿಸಿದ್ದಾರೆ. ಆ ಮುಗ್ದ ಮಗು ಸಹ ಸ್ವಾಮೀಜಿಗಳೊಂದಿಗೆ ಆಟವಾಡಿದೆ. ಇನ್ನು ಜನವರಿ 19 ರಂದು ಸರಳವಾಗಿ ಮಹಾರಥೋತ್ಸವ ನಡೆಯಲಿದ್ದು, ಶ್ರೀಗಳು ಸ್ವತಃ ತಾವೇ ರಥ ಸ್ವಚ್ಛ ಮಾಡಿದ್ದು ವಿಶೇಷ.
ಓದಿ:ಭಾರತೀಯ ಸೇನಾ ದಿನ: ಶುಭ ಕೋರಿದ ಮೋದಿ, ಕೋವಿಂದ್.. ವೀರ ಯೋಧರಿಗೆ 3 ಪಡೆಗಳ ಮುಖ್ಯಸ್ಥರಿಂದ ನಮನ