ಕೊಪ್ಪಳ: ಕೊರೊನಾ ಸೋಂಕಿತರಿಗೆ ಊಟ ತಯಾರಿಸುವ ಸಿಬ್ಬಂದಿ ಜೊತೆ ಸೇರಿ ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಚಪಾತಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊರೊನಾ ಸೋಂಕಿತರಿಗೆ ಅಡುಗೆ ತಯಾರಿಸಲು ಶ್ರೀಗಳು ಸಾಥ್: ವಿಡಿಯೋ ವೈರಲ್ - ಕೊಪ್ಪಳ ಲೇಟೆಸ್ಟ್ ಸುದ್ದಿ
ಅಡುಗೆ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಂದಿಗೆ ಇತ್ತೀಚೆಗೆ ಶ್ರೀ ಗವಿಮಠದ ಶ್ರೀಗಳು ಚಪಾತಿ ಮಾಡಿದ್ದಾರೆ. ಶ್ರೀಗಳು ಚಪಾತಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿತರ ಚಿಕಿತ್ಸೆಗೆ ಜಿಲ್ಲಾಡಳಿತದ ಸಹಯೋಗದೊಂದಿಗೆ 100 ಹಾಸಿಗೆ ಸಾಮರ್ಥ್ಯದ ಕೋವಿಡ್ ಆಸ್ಪತ್ರೆ ಹಾಗೂ 200 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದಾರೆ. ಅಲ್ಲದೆ, ಶ್ರೀಮಠದಿಂದಲೇ ಸೋಂಕಿತರಿಗೆ ಊಟ ಮತ್ತು ಉಪಹಾರವನ್ನು ಒದಗಿಸಿ ಜನರ ಕಷ್ಟಕ್ಕೆ ಶ್ರೀಗಳು ಸ್ಪಂದಿಸುತ್ತಿದ್ದಾರೆ. ಶ್ರೀಮಠದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಶ್ರೀಮಠದಿಂದಲೇ ಅಡುಗೆ ತಯಾರಿಸಿ ಕಳಿಸಲಾಗುತ್ತಿದೆ.
ಅಡುಗೆ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಂದಿಗೆ ಇತ್ತೀಚೆಗೆ ಶ್ರೀ ಗವಿಮಠದ ಶ್ರೀಗಳು ಚಪಾತಿ ಮಾಡಿದ್ದಾರೆ. ಶ್ರೀಗಳು ಚಪಾತಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.