ಕೊಪ್ಪಳ: ಜಿಲ್ಲಾಡಳಿತದ ಸಹಯೋಗದೊಂದಿಗೆ 100 ಹಾಸಿಗೆಯ ಕೋವಿಡ್ ಆಸ್ಪತ್ರೆ ಪ್ರಾರಂಭಿಸುವ ಮೂಲಕ ಕೊಪ್ಪಳದ ಶ್ರೀ ಗವಿಮಠ ಈಗ ಮತ್ತೊಂದು ಸಮಾಜ ಕಾರ್ಯ ಮಾಡಿದೆ.
ಗವಿಮಠದ ಹಾಸ್ಟೆಲ್ನಲ್ಲಿ 200 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆರಂಭ - ಗವಿಮಠ
ಕೊಪ್ಪಳದ ಶ್ರೀ ಗವಿಮಠ ಕೊರೊನಾ ರೋಗಿಗಳ ಸೇವೆಗೆ ಮುಂದಾಗಿದ್ದು, ಜಿಲ್ಲಾಡಳಿತದ ಸಹಯೋಗದೊಂದಿಗೆ 100 ಹಾಸಿಗೆಯ ಕೋವಿಡ್ ಆಸ್ಪತ್ರೆ ಆರಂಭಿಸಿದೆ.
ccc
ನಗರದ ಗವಿಮಠದ ಮಹಿಳಾ ಹಾಸ್ಟೆಲ್ನಲ್ಲಿ ಇಂದು ಮತ್ತೆ 200 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರವನ್ನು ಗವಿಮಠ ಪ್ರಾರಂಭಿಸಿದೆ. ಇಂದು ಸಂಜೆ ಪೂಜೆ ನೆರವೇರಿಸುವ ಮೂಲಕ ಕೋವಿಡ್ ಆರೈಕೆ ಕೇಂದ್ರ ಉದ್ಘಾಟಿಸಲಾಯಿತು. ಹೋಂ ಐಸೋಲೇಷನ್ ನಲ್ಲಿರುವವರು ಕೋವಿಡ್ ಆರೈಕೆ ಕೇಂದ್ರದಲ್ಲಿ ದಾಖಲಾಗಲು ಇದು ಬಳಕೆಯಾಗಲಿದೆ.
ಸಂಸದ ಸಂಗಣ್ಣ ಕರಡಿ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಹಾಲಪ್ಪ ಆಚಾರ್ ಕೋವಿಡ್ ಆರೈಕೆ ಕೇಂದ್ರದ ಪ್ರಾರಂಭದ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Last Updated : May 18, 2021, 9:42 PM IST