ಕರ್ನಾಟಕ

karnataka

ETV Bharat / state

ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರ ಮಾಡಿಸಿದ ಗವಿಮಠ - a women death from covid

ಮೃತಳ ಅಂತ್ಯ ಸಂಸ್ಕಾರ ಮಾಡಲು ಜಿಲ್ಲಾಡಳಿತವಾಗಲಿ, ನಗರಸಭೆಯಾಗಲಿ ಮುಂದಾಗಲಿಲ್ಲ. ಹಾಗಾಗಿ ಗವಿಮಠದಿಂದ ಮೃತಳ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

Gavimath
Gavimath

By

Published : May 13, 2021, 4:30 PM IST

ಕೊಪ್ಪಳ: ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರವನ್ನು ಗವಿಮಠದಲ್ಲಿ ನೆರವೇರಿಸಲಾಗಿದೆ‌.

ಕೊಪ್ಪಳ ನಗರದ 4ನೇ ವಾರ್ಡ್​ನ ನಿವಾಸಿ ಅಂಜಿನಮ್ಮ ಎಂಬ 48 ವರ್ಷದ ಮಹಿಳೆ ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದಳು. ಮೃತಳ ಅಂತ್ಯ ಸಂಸ್ಕಾರ ಮಾಡಲು ಜಿಲ್ಲಾಡಳಿತವಾಗಲಿ, ನಗರಸಭೆಯಾಗಲಿ ಮುಂದಾಗಲಿಲ್ಲ. ಹಾಗಾಗಿ ಗವಿಮಠದಿಂದ ಮೃತಳ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ತಿಳಿದು ಬಂದಿದೆ.

ಶ್ರೀಗಳು ಗವಿಮಠದ ವೃದ್ಧಾಶ್ರಮದಲ್ಲಿರುವ ಕೋವಿಡ್ ಕೇರ್ ಸೆಂಟರ್​ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳನ್ನು ಕರೆಸಿ ಮೃತ ಮಹಿಳೆ ಅಂತ್ಯ ಸಂಸ್ಕಾರ ಮಾಡಿಸಿದ್ದಾರೆ. ಅಂತ್ಯ ಸಂಸ್ಕಾರದ ಖರ್ಚನ್ನು ಶ್ರೀಗವಿಮಠ ಭರಿಸಿದೆ. ಕಳೆದ ಸೋಮವಾರ ಅಂಜಿನಮ್ಮ ಹಾಗೂ ಆಕೆಯ ತಾಯಿ ಕೋವಿಡ್ ಟೆಸ್ಟ್ ಮಾಡಿಸಿದ್ದರು. 75 ವರ್ಷದ ತಾಯಿಗೆ ನೆಗೆಟಿವ್ ಬಂದಿತ್ತು. ಮಗಳು ಅಂಜಿನಮ್ಮನಿಗೆ ಕೋವಿಡ್ ಧೃಡವಾಗಿತ್ತು. ಮನೆಯಲ್ಲಿ ಅಂಜಿನಮ್ಮ ಚಿಕಿತ್ಸೆ ಪಡೆಯುತ್ತಿದ್ದಳು ಎಂದು ತಿಳಿದು ಬಂದಿದೆ.

ABOUT THE AUTHOR

...view details