ಕರ್ನಾಟಕ

karnataka

ETV Bharat / state

ಗಂಗಾವತಿ ನಗರಸಭೆ 'ಕೈ' ವಶ; ಅಧ್ಯಕ್ಷೆ, ಉಪಾಧ್ಯಕ್ಷೆ ಪದಗ್ರಹಣ - Gangawati news

ಮಾಜಿ ಸಂಸದ ಶಿವರಾಮಗೌಡ, ಬ್ಲಾಕ್ ಅಧ್ಯಕ್ಷ ಶಾಮೀದ ಮನಿಯಾರ ನೇತೃತ್ವದಲ್ಲಿ ಮಾಲಾಶ್ರೀ ಸಂದೀಪ್ ಅಧ್ಯಕ್ಷೆಯಾಗಿ, ಸುಧಾ ಸೋಮನಾಥ ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದರು.

Gangawati Municipal Council
ಗಂಗಾವತಿ ನಗರಸಭೆಯ ಅಧ್ಯಕ್ಷೆ, ಉಪಾಧ್ಯಕ್ಷೆ ಪದಗ್ರಹಣ

By

Published : Nov 6, 2020, 11:36 PM IST

ಗಂಗಾವತಿ:ತೀರಾ ಜಿದ್ದಾಜಿದ್ದಿನ ಕಣವಾಗಿದ್ದ ಇಲ್ಲಿನ ನಗರಸಭೆ ಚುನಾವಣೆಯಲ್ಲಿ ಅಂತಿಮವಾಗಿ ಗೆಲುವಿನ ನಗೆ ಬೀರಿ, ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಅಧ್ಯಕ್ಷೆ, ಉಪಾಧ್ಯಕ್ಷೆಯರು ಶುಭ ಶುಕ್ರವಾರದಂದು ಅಧಿಕಾರ ಸ್ವೀಕರಿಸಿದರು.

ಮಾಜಿ ಸಂಸದ ಶಿವರಾಮಗೌಡ, ಬ್ಲಾಕ್ ಅಧ್ಯಕ್ಷ ಶಾಮೀದ ಮನಿಯಾರ ನೇತೃತ್ವದಲ್ಲಿ ಮಾಲಾಶ್ರೀ ಸಂದೀಪ್ ಅಧ್ಯಕ್ಷೆಯಾಗಿ, ಸುಧಾ ಸೋಮನಾಥ ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದರು. ಪೌರಾಯುಕ್ತ ಅರವಿಂದ ಜಮಖಂಡಿ ಹೂಗುಚ್ಛ ನೀಡಿ, ಕಡತ ಹಸ್ತಾಂತರಿಸುವ ಮೂಲಕ ಅಧಿಕಾರ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಅಧ್ಯಕ್ಷೆ ಶಾಮೀದ ಮನಿಯಾರ, ನಗರದ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಆದಾಯ ಸಂಗ್ರಹದ ಮೂಲಕ ಅಭಿವೃದ್ಧಿಗೆ ವೇಗ ನೀಡುತ್ತೇವೆ ಎಂದರು. ಮಾಜಿ ಸಂಸದ ಶಿವರಾಮಗೌಡ ಸೇರಿದಂತೆ ಸದಸ್ಯರು ಹಾಜರಿದ್ದರು.

ABOUT THE AUTHOR

...view details