ಕರ್ನಾಟಕ

karnataka

ETV Bharat / state

ಒಂದೂವರೆ ದಶಕದಲ್ಲಿ ಕಾಣದ ಚಿತ್ರಣವಿದು.. ಭೀಕರತೆ ಸಾಕ್ಷಿಯಾದ ಆಸ್ಪತ್ರೆ - Government Hospital is now empty

ಹೊರ ರೋಗಿಗಳ ಸಂಖ್ಯೆ ದಿನಕ್ಕೆ 650 ರಿಂದ 900ಕ್ಕೆ ಸಮೀಪಿಸುತ್ತಿತ್ತು. ಲಾಕ್​ಡೌನ್​ ಸಂದರ್ಭದಲ್ಲೂ ಆಸ್ಪತ್ರೆಯ ಆವರಣದಲ್ಲಿ ಇಂತಹ ದೃಶ್ಯ ಕಂಡು ಬಂದಿರಲಿಲ್ಲ. ಇದೀಗ ಇಡೀ ಆಸ್ಪತ್ರೆಯ ಆವರಣದಲ್ಲಿ ರೋಗಿಗಳಲ್ಲ, ಒಬ್ಬ ಸಿಬ್ಬಂದಿಯೂ ಇಲ್ಲದಂತಾಗಿದೆ.

gangawati government hospital is now empty
ಗಂಗಾವತಿಯ ಸರ್ಕಾರಿ ಆಸ್ಪತ್ರೆ

By

Published : Jun 16, 2020, 8:08 PM IST

ಗಂಗಾವತಿ:ನಿತ್ಯ ಸಾವಿರಾರು ಜನ ಓಡಾಡುತ್ತಿದ್ದ ಸ್ಥಳವಿದು. ಅತ್ಯುತ್ತಮ ಗುಣಮಟ್ಟದ ಸೇವೆ ಸಿಗುತ್ತದೆ ಎಂಬ ಕಾರಣಕ್ಕೆ ನೆರೆ ಹೊರೆಯ ತಾಲೂಕುಗಳಲ್ಲದೇ ಜಿಲ್ಲೆಯಿಂದಲೂ ರೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದರು. ಆದರೆ, ಇದೇ ಆಸ್ಪತ್ರೆಯಲ್ಲೀಗ ಇಂದು ಒಂದು ನರಪಿಳ್ಳೆಯೂ ಕಾಣಿಸ್ತಿಲ್ಲ. ಇದು ಕೊರೊನಾದ ಭೀಕರತೆಗೆ ಸಾಕ್ಷಿ..

ಗಂಗಾವತಿಯ ಸರ್ಕಾರಿ ಆಸ್ಪತ್ರೆ

ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂಬ ಹಿನ್ನೆಲೆ ನಿತ್ಯ ಜನರಿಂದ ತುಂಬಿ ತುಳುಕುತ್ತಿದ್ದ ಗಂಗಾವತಿ ಉಪ ವಿಭಾಗ ಸರ್ಕಾರಿ ಆಸ್ಪತ್ರೆ ಇದೀಗ ಖಾಲಿ ಖಾಲಿ. ಹೆಸರಿಗೆ 30 ಬೆಡ್ ಆಸ್ಪತ್ರೆಯಾದರೂ ನೂರಕ್ಕೂ ಅಧಿಕ ಒಳ ರೋಗಿಗಳು ದಾಖಲಾಗುತ್ತಿದ್ದರು. ಹೊರ ರೋಗಿಗಳ ಸಂಖ್ಯೆ ದಿನಕ್ಕೆ 650 ರಿಂದ 900ಕ್ಕೆ ಸಮೀಪಿಸುತ್ತಿತ್ತು. ಲಾಕ್​ಡೌನ್​ ಸಂದರ್ಭದಲ್ಲೂ ಆಸ್ಪತ್ರೆಯ ಆವರಣದಲ್ಲಿ ಇಂತಹ ದೃಶ್ಯ ಕಂಡು ಬಂದಿರಲಿಲ್ಲ. ಇದೀಗ ಇಡೀ ಆಸ್ಪತ್ರೆಯ ಆವರಣದಲ್ಲಿ ರೋಗಿಗಳಲ್ಲ, ಒಬ್ಬ ಸಿಬ್ಬಂದಿಯೂ ಇಲ್ಲದಂತಾಗಿದೆ.

ಗಂಗಾವತಿಯ ಸರ್ಕಾರಿ ಆಸ್ಪತ್ರೆ

ಸಹೊದ್ಯೋಗಿಯೊಬ್ಬರಿಗೆ ತಗುಲಿರುವ ಸೋಂಕಿನಿಂದಇಡೀ ಆಸ್ಪತ್ರೆಯ ಸಿಬ್ಬಂದಿ ತಲ್ಲಣಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಬಹುತೇಕ ಎಲ್ಲಾ ರೋಗಿ ಮತ್ತು ಗರ್ಭಿಣಿ, ಬಾಣಂತಿಯರನ್ನೂ ಈಗಾಗಲೇ ಮನೆಗೆ ಕಳುಹಿಸಲಾಗಿದೆ.

ABOUT THE AUTHOR

...view details