ಗಂಗಾವತಿ (ಕೊಪ್ಪಳ) :ಲಾಕ್ಡೌನ್ ಭೀತಿಯಿಂದ ಜನ ಅಗತ್ಯ ವಸ್ತುಗಳ ಖರೀದಿಗೆ ನಗರದಲ್ಲಿ ಮುಗಿಬಿದ್ದ ದೃಶ್ಯ ಕಂಡುಬಂದಿತು.
ಲಾಕ್ಡೌನ್ ಭೀತಿ: ಗಂಗಾವತಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ - Gangavayhi lockdown
ಜಿಲ್ಲೆಯಲ್ಲಿ ಕೊರೊನಾ ಹಾಟ್ ಸ್ಪಾಟ್ ಎಂದು ಗುರುತಿಸಿಕೊಂಡಿರುವ ಗಂಗಾವತಿಯಲ್ಲಿ ಇಂದು ರಾತ್ರಿಯಿಂದ ಹತ್ತು ದಿನಗಳ ಕಾಲ ಲಾಕ್ಡೌನ್ ಮಾಡಲು ಜಿಲ್ಲಾಡಳಿತ ನಿರ್ಣಯ ಕೈಗೊಂಡ ಹಿನ್ನೆಲೆ ಜನ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.
ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ
ಜನಜಂಗುಳಿಯಿಂದಾಗಿ ಕೆಲ ಅಂಗಡಿ ಮಾಲೀಕರಂತೂ ಮಳಿಗೆಯನ್ನು ಅರ್ಧಕ್ಕೆ ತೆರೆದು ವ್ಯಾಪಾರ ವಹಿವಾಟು ನಡೆಸಿದರು. ನಗರದ ಯಾವುದೇ ರಸ್ತೆ, ವೃತ್ತದಲ್ಲಿ ನೋಡಿದರೂ ಜನ ಮತ್ತು ವಾಹನ ಸಂದಣಿ ಕಂಡು ಬಂತು.
ಜಿಲ್ಲೆಯಲ್ಲಿ ಕೊರೊನಾ ಹಾಟ್ ಸ್ಪಾಟ್ ಎಂದು ಗುರುತಿಸಿಕೊಂಡಿರುವ ಗಂಗಾವತಿಯಲ್ಲಿ ಇಂದು ರಾತ್ರಿಯಿಂದ ಹತ್ತು ದಿನಗಳ ಕಾಲ ಲಾಕ್ಡೌನ್ ಮಾಡಲು ಜಿಲ್ಲಾಡಳಿತ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಜನ ಯಾವುದೇ ಸಾಮಾಜಿಕ ಅಂತರ ಕಾಪಾಡದೇ ಸರಕು ಖರೀದಿಗೆ ಮುಗಿಬಿದ್ದಿರುವುದು ಆತಂಕಕ್ಕೆ ಕಾರಣವಾಗಿದೆ.