ಕರ್ನಾಟಕ

karnataka

ETV Bharat / state

ಲಾಕ್​ ಡೌನ್​ ಲಾಭ ಪಡೆದು ಅಣಬೆ ಬೇಸಾಯ: ಸ್ವಾವಲಂಬಿ ಬದುಕು ಕಟ್ಟಿಕೊಂಡ ಗಂಗಾವತಿ ಮಹಿಳೆ - ಗಂಗಾವತಿ ತಾಲೂಕು

ಕೊಪ್ಪಳದ ಜಿಲ್ಲೆಯ ಮಹಿಳೆಯೊಬ್ಬರು ಅಣಬೆ ಬೆಳೆದು ಯಶಸ್ಸು ಕಂಡಿದ್ದಾರೆ. ಲಾಕ್​ ಡೌನ್​ನಲ್ಲಿ ಪ್ರಾರಂಭಿಸಿದ ಇವರ ಪ್ರಯತ್ನ ಕೈ ಹಿಡಿದಿದೆ.

Gangavati woman mushroom Forming
ಗಂಗಾವತಿ ಮಹಿಳೆ ಅಣಬೆ ಬೇಸಾಯ

By

Published : Jul 24, 2021, 9:38 AM IST

ಗಂಗಾವತಿ :ಕೋವಿಡ್ ಲಾಕ್​ ಡೌನ್​ ಎಲ್ಲಾ ಕ್ಷೇತ್ರಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿ ಜನ ಸಂಕಷ್ಟಕ್ಕೆ ಸಿಲುಕಿದರೆ, ತಾಲೂಕಿನ ಮಹಿಳೆಯೊಬ್ಬರು ಇದೇ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡು ಅಣಬೆ ಬೇಸಾಯದಿಂದ ಸ್ವಾವಲಂಬನೆಯ ಬದುಕು ಕಟ್ಟಿಕೊಂಡಿದ್ದಾರೆ.

ಅಣಬೆ ಬೇಸಾಯದ ಬಗ್ಗೆ ಮಾಹಿತಿ ಪಡೆದ ತಾಲೂಕು ಪಂಚಾಯತ್ ಇಒ

ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ನೀಲಮ್ಮ ಮಂಜುನಾಥ ಅಣಬೆ ಬೆಳೆದು ಯಶಸ್ಸು ಕಂಡಿರುವ ಮಹಿಳೆ. ಲಾಕ್​ ಡೌನ್​ ಅವಧಿಯಲ್ಲಿ ಗ್ರಾಮದ ಬೆಟ್ಟದ ಲಿಂಗೇಶ್ವರ ಎಂಬ ಸ್ವಸಹಾಯ ಸಂಘದಿಂದ ಸಾಲ ಪಡೆದುಕೊಂಡ ಇವರು, ಮನೆಯಲ್ಲಿಯೇ ಅಣಬೆ ಬೇಸಾಯಕ್ಕೆ ಶುರುಮಾಡಿದ್ದರು. ಇದೀಗ, ಅವರ ಪರಿಶ್ರಮ ಫಲಕೊಟ್ಟಿದ್ದು, ಪ್ರತಿದಿನ 5 ರಿಂದ 8 ಕೆ.ಜಿ ಅಣಬೆ ಫಸಲು ತೆಗೆಯುತ್ತಿದ್ದಾರೆ.

ಮಹಿಳೆಯ ಅಣಬೆ ಘಟಕಕ್ಕೆ ತಾಲೂಕು ಪಂಚಾತಿಯತ್ ಇಒ ಮೋಹನ್ ಭೇಟಿ ನೀಡಿದರು

ಮಹಿಳೆಯ ಯಶೋಗಾಥೆ ಕೇಳಿದ ತಾಲೂಕು ಪಂಚಾತಿಯತ್ ಇಒ ಮೋಹನ್, ಅಣಬೆ ಘಟಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಣಬೆ ಬೇಸಾಯದ ಲಾಭದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ ಎಂದು ಮಹಿಳೆ ಖುಷಿಯಿಂದ ಹೇಳುತ್ತಾರೆ.

ABOUT THE AUTHOR

...view details