ಗಂಗಾವತಿ :ಕರ್ತವ್ಯ ನಿರತ ಉಪವಿಭಾಗ ಆಸ್ಪತ್ರೆಯ ನರ್ಸ್ಗೆ ಕೊರೊನಾ ಸೋಂಕು ಕಾಣಿಸಿಕೊಂಡರೂ, ಸಾರ್ವಜನಿಕರ ಹಿತದೃಷ್ಟಿಯಿಂದ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಸ್ಪಷ್ಡಪಡಿಸಿದ್ದಾರೆ.
ಗಂಗಾವತಿ ಉಪವಿಭಾಗ ಆಸ್ಪತ್ರೆ ಸೀಲ್ಡೌನ್ ಮಾಡುತ್ತಿಲ್ಲ: ಡಿಸಿ ಸ್ಪಷ್ಟನೆ - ಗಂಗಾವತಿ ಆಸ್ಪತ್ರೆ ಸೀಲ್ ಡೌನ್ ಕುರಿತು ಡಿಸಿ ಸ್ಪಷ್ಟನೆ
ಸಾರ್ವಜನಿಕರ ಹಿತದೃಷ್ಟಿಯಿಂದ ಗಂಗಾವತಿ ಉಪವಿಭಾಗ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡುತ್ತಿಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
![ಗಂಗಾವತಿ ಉಪವಿಭಾಗ ಆಸ್ಪತ್ರೆ ಸೀಲ್ಡೌನ್ ಮಾಡುತ್ತಿಲ್ಲ: ಡಿಸಿ ಸ್ಪಷ್ಟನೆ Koppal Dc Clarification about Gangavati Hospital Seal down](https://etvbharatimages.akamaized.net/etvbharat/prod-images/768-512-7648082-685-7648082-1592365935630.jpg)
ಉಪವಿಭಾಗ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡುತ್ತಾರೆ ಎಂಬ ಊಹಾಪೋಹಗಳು ಹಬ್ಬಿದ ಹಿನ್ನೆಲೆ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಹೀಗಾಗಿ ಜಿಲ್ಲಾಧಿಕಾರಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸೋಂಕು ದೃಢಪಟ್ಟ ಬಳಿಕ ಕೇವಲ 24 ಗಂಟೆಗಳ ಕಾಲ ಮಾತ್ರ ಆಸ್ಪತ್ರೆಯನ್ನು ಬಂದ್ ಮಾಡಿ ಸ್ವಚ್ಛತಾ ಕಾರ್ಯ ಮಾಡಲಾಗಿದೆ. ಬುಧವಾರ ಬೆಳಗ್ಗೆಯಿಂದ ಮತ್ತೆ ಆಸ್ಪತ್ರೆ ಸೇವೆಗೆ ಮುಕ್ತವಾಗಲಿದೆ ಎಂದಿದ್ದಾರೆ.
ಆಸ್ಪತ್ರೆಯ 110 ಸಿಬ್ಬಂದಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಯಲ್ಲಿ ನೆಗೆಟಿವ್ ಬರುವ ಸಿಬ್ಬಂದಿ ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಆದ್ದರಿಂದ ಸಾರ್ವಜನಿಕರು ಯಾವುದೇ ಆತಂಕಪಡುವುದು ಬೇಡ ಎಂದು ಡಿಸಿ ಹೇಳಿದ್ದಾರೆ.
TAGGED:
Koppal Covid Update