ಗಂಗಾವತಿ :ಲಾಕ್ಡೌನ್ ಘೋಷಣೆಯಾದ 45 ದಿನಗಳ ಅವಧಿಯಲ್ಲಿ ಬರೋಬ್ಬರಿ 11 ಸಾವಿರ ಜನ ನಗರಕ್ಕೆ ವಲಸೆ ಬಂದಿರುವ ಅಂಶ ಇದೀಗ ಆರೋಗ್ಯ ಇಲಾಖೆ ಗಮನಕ್ಕೆ ಬಂದಿದೆ.
ಗಂಗಾವತಿ ನಗರದಲ್ಲಿ ಆತಂಕ ಹುಟ್ಟಿಸುತ್ತಿದೆ ವಲಸಿಗರ ಆಗಮನ - covid-19 news in gangavati
ಕೊರೊನಾ ಲಾಕ್ಡೌನ್ ಬಳಿಕ ಹೊರ ರಾಜ್ಯ ಸೇರಿದಂತೆ ನಮ್ಮ ರಾಜ್ಯದ ನಾನಾ ಭಾಗದ ಜಿಲ್ಲೆಯಿಂದ ಕೂಲಿಕಾರರು, ವಲಸೆ ಕಾರ್ಮಿಕರು, ಜನಸಾಮಾನ್ಯರು ಸೇರಿದಂತೆ ಹನ್ನೊಂದುವರೆ ಸಾವಿರ ಜನ ಗಂಗಾವತಿಗೆ ವಲಸೆ ಬಂದಿದ್ದಾರೆ.
ಗಂಗಾವತಿ ನಗರಕ್ಕೆ ಆಗಮಿಸುತ್ತಿರುವ ವಲಸೆ ಕಾರ್ಮಿಕರು
ಹೀಗೆ ವಲಸೆ ಬಂದ ಕಾರ್ಮಿಕರಲ್ಲಿ, ಅದರಲ್ಲೂ ಮೇ 3 ರಂದು ಸಿಎಂ ತಮ್ಮ ಸ್ವಂತ ಊರುಗಳಿಗೆ ಜನ ಮರಳಬಹುದೆಂದು ಘೋಷಣೆ ಮಾಡಿದ ಬಳಿಕ, 10 ಸಾವಿರಕ್ಕೂ ಅಧಿಕ ಜನ ಕೇವಲ ಐದು ದಿನಗಳಲ್ಲಿ ಆಗಮಿಸಿದ್ದಾರೆ. ಈ ಪೈಕಿ ತೆಲಂಗಾಣದಲ್ಲಿ ಸಿಲುಕಿದ್ದ 4, ವಿಜಯವಾಡದಲ್ಲಿ ಸಿಲುಕಿದ್ದ 9 ಜನ ಸೇರಿ ಒಟ್ಟು 11, 505 ಜನ ವಲಸೆ ಹೋದವರು ಗಂಗಾವತಿಗೆ ಮರಳಿರುವ ಅಂಶ ಬೆಳಕಿಗೆ ಬಂದಿದೆ. ಇದು ಇಲ್ಲಿನ ನಿವಾಸಿಗಳಲ್ಲಿ ಆತಂಕ ಹುಟ್ಟಿಸಿದೆ.