ಕರ್ನಾಟಕ

karnataka

ETV Bharat / state

ಗಂಗಾವತಿ: ಮತದಾನಕ್ಕೂ ಮುನ್ನ ಜಾಮೀನು ಪಡೆಯದ ಸದಸ್ಯರಿಗೆ ಜೈಲೊ.. ಬೇಲೋ..? - ಗಂಗಾವತಿ ನಗರಸಭೆ

ಅಧಿಕಾರಕ್ಕೆ ಏರಲು ಕಾಂಗ್ರೆಸ್ ಹಾಗೂ ಬಿಜೆಪಿ ತೀವ್ರ ಕಸರತ್ತು ನಡೆಸಿರುವ ಮಧ್ಯೆಯೇ, ಎರಡೂ ಪಕ್ಷಗಳ ತಲಾ ಮೂರು ಸದಸ್ಯರ ಮೇಲೆ ಕಿಡ್ನಾಪ್ ಪ್ರಕರಣ ದಾಖಲಾಗಿವೆ. ಇದೀಗ ಈ ಸದಸ್ಯರು ತಲೆ ಮರೆಸಿಕೊಂಡಿದ್ದಾರೆ.

gangavati-municipality-president-election-fir-members-jail-bail
ಗಂಗಾವತಿ: ಮತದಾನಕ್ಕೂ ಮುನ್ನ ಜಾಮೀನು ಪಡೆಯದ ಸದಸ್ಯರಿಗೆ ಜೈಲೊ.. ಬೇಲೋ..?

By

Published : Nov 1, 2020, 11:01 PM IST

ಗಂಗಾವತಿ:ಎರಡು ಪ್ರತ್ಯೇಕ ಅಪಹರಣ ಪ್ರಕರಣಗಳಲ್ಲಿ ಭಾಗಿಯಾಗಿರುವ ಇಲ್ಲಿನ ನಗರಸಭೆಯ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ನ.2 ರಂದು ನಡೆಯಲಿರುವ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಪಾಲ್ಗೊಳ್ಳುವರೆ ಅಥವಾ ಇಲ್ಲವೇ ಎಂಬ ಕುತೂಹಲ ಜನರಲ್ಲಿ ಮನೆ ಮಾಡಿದೆ.

ಅಧಿಕಾರಕ್ಕೆ ಏರಲು ಕಾಂಗ್ರೆಸ್ ಹಾಗೂ ಬಿಜೆಪಿ ತೀವ್ರ ಕಸರತ್ತು ನಡೆಸಿರುವ ಮಧ್ಯೆಯೇ, ಎರಡೂ ಪಕ್ಷಗಳ ತಲಾ ಮೂರು ಸದಸ್ಯರ ಮೇಲೆ ಕಿಡ್ನಾಪ್ ಪ್ರಕರಣ ದಾಖಲಾಗಿವೆ. ಇದೀಗ ಈ ಸದಸ್ಯರು ತಲೆ ಮರೆಸಿಕೊಂಡಿದ್ದಾರೆ. ನ.2 ರಂದು ನಡೆಯಲಿರುವ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ನೇರವಾಗಿ ಆಗಮಿಸಲಿದ್ದು, ಆಗ ಪೊಲೀಸರು ಕಿಡ್ನಾಪ್ ಪ್ರಕರಣದಲ್ಲಿ ಬೇಕಿರುವ ಸದಸ್ಯರನ್ನು ಬಂಧಿಸುವರೊ ಅಥವಾ ಮತದಾನಕ್ಕೆ ಹಾಗೂ ಆ ಬಳಿಕ ಬೇಲ್ ಪಡೆಯಲು ಅವಕಾಶ ಕಲ್ಪಿಸಿ ಕೊಡುವರೆ ಕಾದು ನೋಡಬೇಕಿದೆ.

ಕಾಂಗ್ರೆಸ್ ಸದಸ್ಯರ ಮೇಲೆ ಅ.23 ರಂದು, ಬಿಜೆಪಿ ಸದಸ್ಯರ ಮೇಲೆ ಅ.29 ರಂದು ಕಿಡ್ನಾಪ್ ಪ್ರಕರಣ ದಾಖಲಾಗಿದೆ. ಇದುವರೆಗೂ ಎರಡೂ ಪಕ್ಷದ ಸದಸ್ಯರು ಜಾಮೀನು ಪಡೆದುಕೊಂಡಿಲ್ಲ. ಸಾಲು ರಜೆಗಳ ಹಿನ್ನೆಲೆ ಸೋಮವಾರವರೆಗೂ ಆರೋಪಿಗಳಿಗೆ ಜಾಮೀನು ಸಿಗುವ ನಿರೀಕ್ಷೆ ಇಲ್ಲ. ಆದರೆ ಸೋಮವಾರ ನ.2 ರಂದು ಬೆಳಗ್ಗೆ 11 ಗಂಟೆಗೆ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೆ ಚುನಾವಣೆ ನಿಗದಿಯಾಗಿದೆ.

ABOUT THE AUTHOR

...view details