ಕರ್ನಾಟಕ

karnataka

ETV Bharat / state

ಕೊರೊನಾ ಹರಡಿದರೆ ಜಾಮಿಯಾ ಮಸೀದಿ ಅಧ್ಯಕ್ಷರೇ ಹೊಣೆ : ಗಂಗಾವತಿ ನಗರಸಭೆ ಸದಸ್ಯನ ಆರೋಪ - Gangavati Municipal Council member barrage against mosque president

ಆರೋಗ್ಯ ಇಲಾಖೆಯ ಅಧಿಕಾರಿಗಳು ಸೀಲ್ ಹಾಕಿದ್ದಾರೆ. ಹೀಗಾಗಿ ಮನೆಯಲ್ಲಿ ಇರಬೇಕೆಂದು ಮೌಲ್ವಿಗೆ ಹೇಳಿದರೂ, ಏನು ಆಗುವುದಿಲ್ಲ ಎಂದು ಕರೆದೊಯ್ದ ಜಾಮಿಯಾ ಮಸೀದಿ ಅಧ್ಯಕ್ಷ ಸಾಮೂಹಿಕ ಪ್ರಾರ್ಥನೆ ಮಾಡಿಸಿದ್ದಾರೆ ಎಂದು ಗಂಗಾವತಿ ನಗರಸಭಾ ಸದಸ್ಯ ಎಂ.ಡಿ. ಉಸ್ಮಾನ್ ಆರೋಪಿಸಿದ್ದಾರೆ.

Gangavati Municipal Council member barrage against mosque president
ನಗರಸಭೆ ಸದಸ್ಯ ಎಂ.ಡಿ. ಉಸ್ಮಾನ್

By

Published : Jun 12, 2020, 12:52 PM IST

ಗಂಗಾವತಿ : ಆದೋನಿಯಿಂದ ಬಂದ ಮೌಲ್ವಿ ಹೋಂ ಕ್ವಾರಂಟೈನ್​ನಲ್ಲಿರಬೇಕೆಂದು ಬಯಸಿದ್ದರೂ ಒತ್ತಾಯ ಪೂರ್ವಕವಾಗಿ ಜಾಮಿಯಾ ಮಸೀದಿ ಅಧ್ಯಕ್ಷರು ಅವರನ್ನ ಕರೆದೊಯ್ದು ಸಾಮೂಹಿಕ ಪ್ರಾರ್ಥನೆ ಮಾಡಿಸಿದ್ದಾರೆ ಎಂದು ನಗರಸಭೆ ಸದಸ್ಯ ಎಂ.ಡಿ. ಉಸ್ಮಾನ್ ಆರೋಪಿಸಿದ್ದಾರೆ.

ಆರೋಗ್ಯ ಇಲಾಖೆಯ ಅಧಿಕಾರಿಗಳು ಸೀಲ್ ಹಾಕಿದ್ದಾರೆ, ಹೀಗಾಗಿ ಮನೆಯಲ್ಲಿ ಇರಬೇಕೆಂದು ಮೌಲ್ವಿ ಹೇಳಿದರೂ, ಏನು ಆಗುವುದಿಲ್ಲ ಎಂದು ಕರೆದೊಯ್ದ ಮಸೀದಿ ಅಧ್ಯಕ್ಷ, ಜೂ.8 ರಿಂದ 10 ರವರೆಗೆ ದಿನಕ್ಕೆ ಐದು ಬಾರಿ ಸಾಮೂಹಿಕ ಪ್ರಾರ್ಥನೆ ಮಾಡಿಸಿದ್ದಾರೆ.

ನಗರಸಭೆ ಸದಸ್ಯ ಎಂ.ಡಿ. ಉಸ್ಮಾನ್

ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ತೆರಳಿದವರಿಗೆ ಏನಾದರೂ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಮಸೀದಿ ಅಧ್ಯಕ್ಷ ನವಾಬ್ ನೂರುದ್ದೀನ್ ಖಾದ್ರಿಯೇ ಹೊಣೆ ಹೊರಬೇಕಾಗುತ್ತದೆ ಎಂದು ನಗರಸಭಾ ಸದಸ್ಯ ಎಂ.ಡಿ. ಉಸ್ಮಾನ್ ಎಚ್ಚರಿಕೆ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details