ಗಂಗಾವತಿ (ಕೊಪ್ಪಳ):ಇತ್ತೀಚೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಪ್ರಕರಣವೊಂದರಲ್ಲಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಸುಮಾರು 2 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿ, ದಂಡ ವಿಧಿಸಿದ ನ್ಯಾಯಾಧೀಶರು ಗಂಗಾವತಿ ಮೂಲದ ಸಣ್ಣ ಕುಗ್ರಾಮಕ್ಕೆ ಸೇರಿದವರೆಂಬ ಕಾರಣಕ್ಕೆ ಅಲ್ಲಿನ ಜನ ಹೆಮ್ಮೆಪಡುತ್ತಿದ್ದಾರೆ.
ಹೌದು, ಗಂಗಾವತಿ ತಾಲೂಕಿನ ಅಷ್ಟೇನೂ ಮೂಲಸೌಕರ್ಯಗಳಿಲ್ಲದ ಜೀರಾಳ ಕಲ್ಗುಡಿ ಎಂಬ ಗ್ರಾಮದವರಾದ ನ್ಯಾಯಮೂರ್ತಿ ಎಂ.ಎಸ್.ಪಾಟೀಲ್ ಮಾಜಿ ಪ್ರಧಾನಿ ದೇವೇಗೌಡರಿಗೆ ನೈಸ್ ಕಾರಿಡಾರ್ ರಸ್ತೆ ಪ್ರಕರಣದ ಮಾನನಷ್ಟ ಮೊಕದ್ದಮೆಯಲ್ಲಿ 2 ಕೋಟಿ ರೂ. ಪರಿಹಾರ ನೀಡಲು ಆದೇಶಿಸಿದ್ದರು.