ಕರ್ನಾಟಕ

karnataka

ETV Bharat / state

ರಾಮಮಂದಿರ ಶಿಲಾನ್ಯಾಸಕ್ಕೆ ಹನುಮನ ನಾಡಿನಿಂದ ಪವಿತ್ರಜಲ, ಮೃತ್ತಿಕೆ - ಗಂಗಾವತಿ

ರಾಮಮಂದಿರ ನಿರ್ಮಾಣಕ್ಕೆ ಆಗಸ್ಟ್​ 5ಕ್ಕೆ ಶಿಲಾನ್ಯಾಸ ನೆರವೇರಲಿರುವ ಹಿನ್ನೆಲೆ ಪವನಸುತನ ಜನ್ಮಸ್ಥಾನ ಎಂದು ಕರೆಯಿಸಿಕೊಳ್ಳುವ ಅಂಜನಾದ್ರಿ ಬೆಟ್ಟದ ಮೃತ್ತಿಕೆ (ಮಣ್ಣು), ಮಾಧ್ವಯತಿಗಳ ತಪೋ ಭೂಮಿಯಾದ ನವವೃಂದಾವನ ಗಡ್ಡೆಯಲ್ಲಿನ ಮರಳು ಹಾಗೂ ಪವಿತ್ರ ತುಂಗಭದ್ರಾ ನದಿ ಮತ್ತು ಪಂಪಾಸರೋವರದ ಜಲವನ್ನು ಸಂಗ್ರಹಿಸಿ ಕಳುಹಿಸಿ ಕೊಡಲಾಗುತ್ತಿದೆ.

Gangavati
ರಾಮಮಂದಿರ ಶಿಲಾನ್ಯಾಸಕ್ಕೆ ಹನುಮನ ನಾಡಿನಿಂದ ಪವಿತ್ರಜಲ, ಮೃತ್ತಿಕೆ..

By

Published : Jul 27, 2020, 8:20 AM IST

ಗಂಗಾವತಿ:ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗಸ್ಟ್​ 5ಕ್ಕೆ ಶಿಲಾನ್ಯಾಸ ನೆರವೇರಲಿರುವ ಹಿನ್ನೆಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಿಂದ ಮೃತ್ತಿಕೆಯನ್ನು ಸಂಗ್ರಹಿಸಿರುವ ಹನುಮನ ಭಕ್ತರು ಅಯೋಧ್ಯೆಗೆ ಸಾಗಿಸಲು ತಯಾರಿ ನಡೆಸಿದ್ದಾರೆ.

ರಾಮಮಂದಿರ ಶಿಲಾನ್ಯಾಸಕ್ಕೆ ಹನುಮನ ನಾಡಿನಿಂದ ಪವಿತ್ರಜಲ, ಮೃತ್ತಿಕೆ..

ಶ್ರೀರಾಮ ಚಂದ್ರನ ಶಿಷ್ಯೋತ್ತಮನಾದ ಪವನಸುತನ ಜನ್ಮಸ್ಥಾನ ಎಂದು ಕರೆಯಿಸಿಕೊಳ್ಳುವ ಅಂಜನಾದ್ರಿ ಬೆಟ್ಟದ ಮೃತ್ತಿಕೆ (ಮಣ್ಣು), ಮಾಧ್ವಯತಿಗಳ ತಪೋ ಭೂಮಿಯಾದ ನವವೃಂದಾವನ ಗಡ್ಡೆಯಲ್ಲಿನ ಮರಳು ಹಾಗೂ ಪವಿತ್ರ ತುಂಗಭದ್ರಾ ನದಿ ಮತ್ತು ಪಂಪಾಸರೋವರದ ಜಲವನ್ನು ಸಂಗ್ರಹಿಸಿ ಕಳುಹಿಸಿ ಕೊಡಲಾಗುತ್ತಿದೆ.

ಇದರ ಅಂಗವಾಗಿ ಸಂಗ್ರಹಿಸಲಾದ ಮೃತ್ತಿಗೆ ಮತ್ತು ಜಲಕ್ಕೆ ಅಂಜನಾದ್ರಿ ದೇಗುಲದಲ್ಲಿ ಬಜರಂಗ ದಳದ ಪ್ರಮುಖರಾದ ವಿನಯ್ ಪಾಟೀಲ್, ಸುಭಾಶ್, ಶರಣಪ್ಪ, ದೊಡ್ಡಬಸವ, ರಾಮಾಂಜನೇಯ, ಕಾಶಿ, ಚಿದಾನಂದ್, ಬಸಂತ್ಗೌಡ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ABOUT THE AUTHOR

...view details