ಗಂಗಾವತಿ: ನಗರದಲ್ಲಿ ಯುವಕರು ಮತ್ತು ಪತ್ರಕರ್ತರು ಸೇರಿ ಹೋಳಿ ಹಬ್ಬದ ಅಂಗವಾಗಿ ಓಕುಳಿಯಾಡಿದ್ದ ಚಿತ್ರಗಳನ್ನು ದಿ ಕಾಶ್ಮೀರಿ ಫೈಲ್ಸ್ ಚಿತ್ರ ತಂಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಇದೀಗ ಓಕುಳಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿವೆ.
ಹೋಳಿ ಹಬ್ಬದ ಅಂಗವಾಗಿ ನಗರದ ಕೆಲ ಯುವಕರು ಹಾಗೂ ಪತ್ರಕರ್ತರು ಸೇರಿ ದಿ ಕಾಶ್ಮೀರ ಫೈಲ್ ಚಿತ್ರದಲ್ಲಿ ನಟ ಅನುಪಮ್ ಖೇರ್ ಮಾಡಿಕೊಂಡಿದ್ದ ಶಿವನ ವಿನ್ಯಾಸ ಹೋಲುವ ಮಾದರಿಯಲ್ಲಿ ಮೇಕಪ್ ಮಾಡಿಕೊಂಡು ಹೋಳಿಯಾಡಿದ್ದರು.