ಗಂಗಾವತಿ: ತಾಲೂಕಿನ ಶ್ರೀರಾಮನಗರದಲ್ಲಿರುವ ಸಮಾನ ಮನಸ್ಕ ಯುವಕರ 'ಕ್ಲೀನ್ ಆ್ಯಂಡ್ ಗ್ರೀನ್ ಫೋರ್ಸ್ ಟೀಂ' ವಿಶ್ವ ಜಲ ದಿನವನ್ನು ವಿಭಿನ್ನವಾಗಿ ಆಚರಿಸಿತು. ಇದೇ ಸಂದರ್ಭದಲ್ಲಿ ಕಿಡಿಗೇಡಿಗಳು ಹೊತ್ತಿಸಿದ್ದ ಬೆಂಕಿಯನ್ನು ನಂದಿಸಿದರು.
ಕಿಡಿಗೇಡಿಗಳು ಹಚ್ಚಿದ ಬೆಂಕಿ ನಂದಿಸಿ 'ವಿಶ್ವ ಜಲ ದಿನಾಚರಣೆ' ಆಚರಿಸಿದ ಗ್ರೀನ್ ಫೋರ್ಸ್ ಟೀಮ್ - ವಿಶ್ವ ಜಲ ದಿನಾಚರಣೆ
ನೀವು ಬೆಂಕಿ ಇಡಿ ನಾವು ನೀರೆರೆಯುತ್ತೇವೆ: ನೀವು ಮರ ಕಡಿಯಿರಿ..! ನಾವು ಸಸಿ ನೆಡುತ್ತೇವೆ ಎಂಬ ಘೋಷ ವಾಕ್ಯದೊಂದಿಗೆ ಗ್ರಾಮದ ಉಪ ಕಾಲುವೆ ಮೇಲ್ಭಾಗದಲ್ಲಿನ ನೂರಾರು ಮೀಟರ್ ಹುಲ್ಲುಗಾವಲಿಗೆ ಯಾರೋ ಕಿಡಿಗೇಡಿಗಳು ಇಟ್ಟಿದ್ದ ಬೆಂಕಿಯನ್ನು ನಂದಿಸಿದರು.
ವಿಶ್ವ ಜಲ ದಿನಾಚರಣೆ
ನೀವು ಬೆಂಕಿ ಇಡಿ ನಾವು ನೀರೆರೆಯುತ್ತೇವೆ: ನೀವು ಮರ ಕಡಿಯಿರಿ..! ನಾವು ಸಸಿ ಹಚ್ಚುತ್ತೇವೆ ಎಂಬ ಘೋಷ ವಾಕ್ಯದೊಂದಿಗೆ ಗ್ರಾಮದ ಉಪ ಕಾಲುವೆ ಮೇಲ್ಭಾಗದಲ್ಲಿನ ನೂರಾರು ಮೀಟರ್ ಹುಲ್ಲುಗಾವಲಿಗೆ ಯಾರೋ ಕಿಡಿಗೇಡಿಗಳು ಇಟ್ಟಿದ್ದ ಬೆಂಕಿಯನ್ನು ನಂದಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ರಫಿ ನೇತೃತ್ವದ ಯುವಕರ ತಂಡ ಕಳೆದ ಕೆಲ ತಿಂಗಳಿಂದ ಗ್ರಾಮ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪರಿಸರ ರಕ್ಷಣೆಯ ಕಾರ್ಯ ಮಾಡುತ್ತಿದೆ. ಅಲ್ಲದೆ ಬೇಸಿಗೆಯಲ್ಲಿ ಪಕ್ಷಿ ಸಂಕುಲಕ್ಕೆ ನೀರು, ಆಹಾರ ಒದಗಿಸುವ ಕೆಲಸ ಮಾಡುವ ಮೂಲಕ ಜನರ ಗಮನ ಸೆಳೆಯುತ್ತಿದೆ.