ಗಂಗಾವತಿ: ನಗರದ ಗಾಂಧಿವೃತ್ತದ ಸಮೀಪವಿರುವ ಕಿಲ್ಲಾ ಪ್ರದೇಶದಲ್ಲಿನ ಮೌಲ್ವಿ ಒಬ್ಬರಲ್ಲಿ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆ, ಆ ಪ್ರದೇಶದ ನೂರು ಮೀಟರ್ ಸುತ್ತ ಸೀಲ್ಡೌನ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ನಗರದ ಹೃದಯ ಭಾಗವಾದ ಗಾಂಧಿವೃತ್ತವು ನೂರು ಮೀಟರ್ ವ್ಯಾಪ್ತಿಯಲ್ಲಿ ಒಳಪಡುವುದರಿಂದ ಅದು ಕೂಡ ಸಂಪೂರ್ಣ ಬಂದ್ ಆಗಲಿದೆ.
ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿ 12 ಗಂಟೆ ಕಳೆದರೂ ಆತ ವಾಸಿಸುತ್ತಿದ್ದ ಪ್ರದೇಶವನ್ನು ಸೀಲ್ಡೌನ್ ಮಾಡಲು ಅಧಿಕಾರಿಗಳು ತ್ವರಿತಗತಿಯಲ್ಲಿ ಆಸಕ್ತಿ ತೋರಲಿಲ್ಲ. ಈ ಬಗ್ಗೆ 'ಈಟಿವಿ ಭಾರತ'ದಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿ ವರ್ಗ ಚುರುಕಾಗಿದೆ. ಇದರ ಭಾಗವಾಗಿ ಮೊದಲಿಗೆ ಗಾಂಧಿವೃತ್ತವನ್ನು ಸೀಲ್ಡೌನ್ ಮಾಡಲು ಮುಂದಾಗಿದ್ದಾರೆ.