ಕರ್ನಾಟಕ

karnataka

ETV Bharat / state

ಗಂಗಾವತಿಗೂ ಬೇಕು ಜಿಲ್ಲೆಯ ಸ್ಥಾನಮಾನ: ನಮೋಗೆ ಯುವಕ ಟ್ವೀಟ್​​ - ಪ್ರಧಾನಿ ಮೋದಿಗೆ ಟ್ವಿಟ್​ ಮಾಡಿದ ಯುವಕ

ಗಂಗಾವತಿ ಯುವಕ ಮಂಜುನಾಥ ಕಟ್ಟಿಮನಿ ಗಂಗಾವತಿಯನ್ನು ಆಡಳಿತಾತ್ಮಕವಾಗಿ ವಿಭಜಿಸಿ ಪ್ರತ್ಯೇಕ ಜಿಲ್ಲೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ನೇರವಾಗಿ ಟ್ವೀಟ್​​​ ಮಾಡಿ ಗಮನ ಸೆಳೆದಿದ್ದಾನೆ.

ಮಂಜುನಾಥ ಕಟ್ಟಿಮನಿ

By

Published : Oct 3, 2019, 3:03 PM IST

ಗಂಗಾವತಿ:ಸಾಕಷ್ಟು ಆದಾಯ, ಸಂಪನ್ಮೂಲ ಹೊಂದಿರುವ ಗಂಗಾವತಿ ಆಡಳಿತಾತ್ಮಕವಾಗಿ ವಿಭಜಿಸಿ ಪ್ರತ್ಯೇಕ ಜಿಲ್ಲೆ ಮಾಡಬೇಕು ಎಂದು ಸ್ಥಳೀಯ ಯುವಕನೊಬ್ಬ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ನೇರವಾಗಿ ಟ್ವೀಟ್​ ಮಾಡಿ ಒತ್ತಾಯಿಸಿದ್ದಾರೆ.

ಟ್ವಿಟ್​

ಸ್ಥಳೀಯ ಯುವಕ ಮಂಜುನಾಥ ಕಟ್ಟಿಮನಿ, ಮೋದಿ ಜೊತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಟ್ವೀಟ್​ ಮಾಡಿದ್ದಾರೆ. ಇದೀಗ ಈ ಯುವಕನ ಟ್ವೀಟ್​ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಇಷ್ಟಕ್ಕೂ ಈ ಯುವಕ ಏನು ಟ್ವೀಟ್​​ ಮಾಡಿದ್ದಾರೆ ಎಂದರೆ, ಮಾನ್ಯ ಮೋದಿಜಿ/ ಯಡಿಯೂರಪ್ಪ ಅವರೇ ಗಂಗಾವತಿ ಕಳೆದ 25 ವರ್ಷದಿಂದ ಭೌಗೋಳಿಕ ಹಾಗೂ ಸಾಂಸ್ಕೃತಿಕ, ಆರ್ಥಿಕವಾಗಿ ಹೆಚ್ಚು ಆದಾಯ ತೆರಿಗೆ ಕಟ್ಟುವ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ವಾಣಿಜ್ಯ ನಗರ. ಈ ಹಿನ್ನೆಲೆಯಲ್ಲಿ ಕೂಡಲೆ ಗಂಗಾವತಿಯನ್ನು ಭತ್ತದ ಖಣಜದ ಜಿಲ್ಲೆ ಎಂದು ಘೋಷಣೆ ಮಾಡಿ ಎಂದು ಒತ್ತಾಯಿಸಿದ್ದಾನೆ.

ಬಳ್ಳಾರಿ ವಿಭಜಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ ಚಿಕ್ಕೋಡಿ, ಮಧುಗಿರಿ, ಜಮಖಂಡಿ, ಶಿಕಾರಿಪುರದಂತೆ ಕೊಪ್ಪಳ ವಿಭಜಿಸಿ ಗಂಗಾವತಿಯನ್ನು ಜಿಲ್ಲಾ ಕೇಂದ್ರವಾಗಿಸಬೇಕೆಂಬ ಆಗ್ರಹ ಈಗ ಸಾಮಾಜಿಕ ಜಾಲತಾಣಗಳನ್ನು ವೈರಲ್ ಆಗುತ್ತಿದೆ.

ABOUT THE AUTHOR

...view details