ಗಂಗಾವತಿ:ತಾಲೂಕಿನ ಆನೆಗೊಂದಿ ಸಮೀಪದ ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿರುವ ನವ ವೃಂದಾವನದಲ್ಲಿ ಮಂಗಳವಾರ ವ್ಯಾಸರಾಜ ತೀರ್ಥರ ಶಿಷ್ಯರಾದ ಶ್ರೀನಿವಾಸ ತೀರ್ಥರ ಆರಾಧಾನ ಮಹೋತ್ಸವವನ್ನು ಲಾಕ್ಡೌನ್ ಪರಿಣಾಮ ಸಾಂಕೇತಿಕವಾಗಿ ಆಚರಿಸಲಾಯಿತು.
ಗಂಗಾವತಿ: ನವ ವೃಂದಾವನದಲ್ಲಿ ಶ್ರೀನಿವಾಸ ತೀರ್ಥರ ಆರಾಧನೆ - ಲಾಕ್ ಡೌನ್ ಪರಿಣಾಮ ಸಾಂಕೇತಿಕವಾಗಿ
ತಾಲೂಕಿನ ಆನೆಗೊಂದಿ ಸಮೀಪದ ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿರುವ ನವ ವೃಂದಾವನದಲ್ಲಿ ಮಂಗಳವಾರ ವ್ಯಾಸರಾಜ ತೀರ್ಥರ ಶಿಷ್ಯರಾದ ಶ್ರೀನಿವಾಸ ತೀರ್ಥರ ಆರಾಧಾನ ಮಹೋತ್ಸವವನ್ನು ಲಾಕ್ಡೌನ್ ಪರಿಣಾಮ ಸಾಂಕೇತಿಕವಾಗಿ ಆಚರಿಸಲಾಯಿತು.
ಆನೆಗೊಂದಿ ಗ್ರಾಮದ ನಂಜನಗೂಡು ಶ್ರೀರಾಘವೇಂದ್ರ ಸ್ವಾಮೀಜಿ ಮಠದ ಅರ್ಚರಕರಾದ ವಿಜಯೇಂದ್ರ ಆಚಾರ್ಯ ಹಾಗೂ ನರಸಿಂಹ ಆಚಾರ್ಯ ಗಡ್ಡೆಗೆ ಆಗಮಿಸಿ ಮೊದಲಿಗೆ ನೈರ್ಮಲ್ಯ ಅಭಿಷೇಕ ಸೇವೆ ನೆರವೇರಿಸಿದರು. ಬಳಿಕ ಶ್ರೀಗಳ ಮಧ್ಯಾರಾಧನೆಯ ನಿಮಿತ್ತ ಬೃಂದಾವನಕ್ಕೆ ಶೇಷ ವಸ್ತ್ರ ಅಲಂಕಾರ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.
ಹೊಸಪೇಟೆ, ಗಂಗಾವತಿ ಸೇರಿದಂತೆ ಆಯ್ದ ಭಕ್ತರು ಆಗಮಿಸಿ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ಶ್ರೀಮಠದ ವ್ಯವಸ್ಥಾಪಕ ಸುಮಿತ್ ಕುಲಕರ್ಣಿ ಇದ್ದರು. ಬಳಿಕ ಶ್ರೀಗಳ ಮಧ್ಯಾರಾಧನೆಯ ನಿಮಿತ್ತ ಬೃಂದಾವನಕ್ಕೆ ಶೇಷ ವಸ್ತ್ರ ಅಲಂಕಾರ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.