ಗಂಗಾವತಿ : ತಾಲೂಕಿನ ಸಣಾಪುರ ಗ್ರಾಮ ಪಂಚಾಯತ್‌ನ ವಿರುಪಾಪುರ ಗಡ್ಡೆ ಸಮೀಪ ಇರುವ ಹಾಗೂ ರಾಮಾಯಣ ಕಾಲದ್ದು ಎಂದು ಹೇಳಲಾಗುವ ಕಲ್ಲಿನ ಸೇತುವೆಯ ಬಳಿ ರಾಜ್ಯ ಹೆದ್ದಾರಿ 130 ರಸ್ತೆಯಲ್ಲಿ ಕುಸಿತ ಕಂಡು ಬಂದಿದೆ.
ರಾಮಾಯಣ ಕಾಲದ ಕಲ್ಲುಸೇತುವೆ ಬಳಿ ರಸ್ತೆ ಕುಸಿತ.. ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು.. - koppal gangavathi road collapsed news
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಸಿದ್ಧ ಐತಿಹಾಸಿಕ ಕ್ಷೇತ್ರ ವಿರುಪಾಪುರ ಗಡ್ಡೆ ಸಮೀಪದ ರಾಜ್ಯ ಹೆದ್ದಾರಿ 130ರಲ್ಲಿ ರಸ್ತೆ ಕುಸಿತ ಕಂಡು ಬಂದಿದ್ದು, ರಸ್ತೆಯ ಪಕ್ಕದಲ್ಲಿ ಕಾಲುವೆ ಮೂಲಕ ನೀರು ಹರಿಯುತ್ತಿರೋದ್ರಿಂದ ಈ ಅವಘಡ ಸಂಭವಿಸಿದೆ ಎಂದು ಲೋಕೊಪಯೊಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
![ರಾಮಾಯಣ ಕಾಲದ ಕಲ್ಲುಸೇತುವೆ ಬಳಿ ರಸ್ತೆ ಕುಸಿತ.. ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು..](https://etvbharatimages.akamaized.net/etvbharat/prod-images/768-512-5153003-thumbnail-3x2-roadcollpas.jpg)
ರಾಮಾಯಣ ಕಾಲದ ಕಲ್ಲುಸೇತುವೆ ಬಳಿ ರಸ್ತೆಕುಸಿತ
ರಾಮಾಯಣ ಕಾಲದ ಕಲ್ಲುಸೇತುವೆ ಬಳಿ ರಸ್ತೆ ಕುಸಿತ..
ರಸ್ತೆ ಬದಿಯಲ್ಲಿ ಹಿಂದಿನ ಕಾಲದ ಕಲ್ಲಿನಿಂದ ನಿರ್ಮಿಸಲಾದ ಕಾಲುವೆ ಮೂಲಕ ನೀರು ಹರಿಯುತ್ತಿದ್ದರಿಂದ ರಸ್ತೆಯಲ್ಲಿ ಕುಸಿತ ಕಂಡು ಬಂದಿದೆ. ಸುಮಾರು ಆರು ಅಡಿಗೂ ಹೆಚ್ಚು ಆಳ ನಿರ್ಮಾಣವಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ತಿರುಮಲರಾವ್ ಕುಲಕರ್ಣಿ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಂಕರ್ ಐಲಿ, ಈ ಬಗ್ಗೆ ಪರಿಶೀಲನೆ ನಡೆಸಿ ಆದಷ್ಟು ಬೇಗ ರಸ್ತೆ ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.