ಗಂಗಾವತಿ:ತಾಲ್ಲೂಕಿನ ಜಂಗಮರಕಲ್ಗುಡಿಯಲ್ಲಿ ನಡೆಯುತ್ತಿರುವ ಗಂಗಾವತಿ ತಾಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.
ಗಂಗಾವತಿ: 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ - ಗಂಗಾವತಿ
ಜಂಗಮರಕಲ್ಗುಡಿಯಲ್ಲಿ ನಡೆಯುತ್ತಿರುವ ಗಂಗಾವತಿ ತಾಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶಾಸಕ ಬಸವರಾಜ ದಢೇಸುಗೂರು ಚಾಲನೆ ನೀಡಿದರು.
ಗ್ರಾಮದ ಶ್ರೀರಾಮ ದೇವಸ್ಥಾನದಿಂದ ಹೊರಟ ಅಧ್ಯಕ್ಷೆ ಮುಮ್ತಾಜ್ ಬೇಗಂ ಹಾಗೂ ಅವರ ಪತಿ ಪತ್ರಕರ್ತ ಸಿದ್ದು ಬಿರಾದಾರ್ ಇದ್ದ ರಥದ ಮೆರವಣಿಗೆ ವೇದಿಕೆ ಸ್ಥಳದವರೆಗೂ ಅದ್ಧೂರಿಯಾಗಿತ್ತು. ಕಲಾ ತಂಡಗಳು, ಕುಂಭ ಹೊತ್ತ ಮಹಿಳೆಯರು, ಸಾವಿರಾರು ಜನ ಸಾಹಿತ್ಯಾಸಕ್ತರನ್ನೊಳಗೊಂಡ ಮೆರವಣಿಗೆ ಆಕರ್ಷಕವಾಗಿತ್ತು. ಮುಖ್ಯವಾಗಿ ಗ್ರಾಮದ ಮಹಿಳೆಯರು ಸಮ್ಮೇಳನ ಎಂದರೆ ತಮ್ಮೂರಿನ ಜಾತ್ರೆಯಂತೆ ಭಾವಿಸಿ ಮೆರವಣಿಗೆಯಲ್ಲಿ ನೃತ್ಯ ಮಾಡಿ, ಹಾಡು ಹಾಡಿ ಸಂಭ್ರಮಿಸಿದರು. ಇದಕ್ಕೂ ಮೊದಲು ಧ್ವಜಾರೋಹಣ ಮಾಡುವ ಮೂಲಕ ಶಾಸಕ ಬಸವರಾಜ ದಢೇಸುಗೂರು ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದರು.
ವಿವಿಧ ಜಾನಪದ ಕಲಾ ತಂಡಗಳ ನೃತ್ಯ ಕನ್ನಡ ಕಂಪನ್ನು ಪಸರಿಸುವಂತೆ ಮಾಡಿತು. ಇನ್ನೂ ವಿಶೇಷವೆಂದರೆ ಆಂಧ್ರ ಮೂಲದ ನಿವಾಸಿಗಳೇ ಹೆಚ್ಚಿರುವ ಗ್ರಾಮದ ಯುವಕರು, ನಿವಾಸಿಗಳು ಮೆರವಣಿಗೆಯುದ್ದಕ್ಕೂ ಭರ್ಜರಿ ಸ್ಟೆಪ್ ಹಾಕಿದ್ರು. ಸಾವಿರಾರು ಮಹಿಳೆಯರು ಹಳದಿ, ಕೆಂಪು ಬಣ್ಣದ ಸೀರೆಯನ್ನುಟ್ಟು ಪೂರ್ಣಕುಂಭದಲ್ಲಿ ಭಾಗಿಯಾಗಿದ್ದು, ಅದ್ದೂರಿ ಕನ್ನಡ ಜಾತ್ರೆಗೆ ಸಾಕ್ಷಿಯಾಗಿದ್ದರು.